×
Ad

ಬ್ರಿಟಿಶ್ ವಿಮಾನದಲ್ಲಿ ಹೊಗೆ: ಪ್ರಯಾಣಿಕರ ತುರ್ತು ತೆರವು

Update: 2019-08-06 21:58 IST

ಲಂಡನ್, ಆ. 6: ಬ್ರಿಟಿಶ್ ಏರ್‌ವೇಸ್ ವಿಮಾನವೊಂದು ಭೂಸ್ಪರ್ಶ ಮಾಡುವ ಸ್ವಲ್ಪವೇ ಮೊದಲು ಅದರ ಕ್ಯಾಬಿನ್‌ನಲ್ಲಿ ಹೊಗೆ ತುಂಬಿದ ಹಿನ್ನೆಲೆಯಲ್ಲಿ, ಪ್ರಯಾಣಿಕರನ್ನು ತುರ್ತಾಗಿ ವಿಮಾನದಿಂದ ತೆರವುಗೊಳಿಸಲಾಯಿತು.

ಲಂಡನ್‌ನ ಹೀತ್ರೂ ವಿಮಾನ ನಿಲ್ದಾಣದಿಂದ ಸೋಮವಾರ ಮಧ್ಯಾಹ್ನ 3:10ಕ್ಕೆ ಹಾರಾಟ ಆರಂಭಿಸಿದ ವಿಮಾನವು ವೆಲೆನ್ಸಿಯದಲ್ಲಿ ಇಳಿಯುತ್ತಿರುವಾಗ ಈ ಘಟನೆ ಸಂಭವಿಸಿದೆ ಎಂದು ಬ್ರಿಟಿಶ್ ಏರ್‌ವೇಸ್ ತಿಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ.

ಪ್ರಯಾಣಿಕರು ರನ್‌ವೇಯಲ್ಲೇ ಎಮರ್ಜೆನ್ಸಿ ಶೂಟ್‌ಗಳ ಮೂಲಕ ಇಳಿದರು.

ಬ್ರಿಟಿಶ್ ಏರ್‌ವೇಸ್ ವಿಮಾನದಲ್ಲಿದ್ದ 175 ಪ್ರಯಾಣಿಕರ ಕ್ಷಮೆ ಕೋರಿದೆ.

ವಿಮಾನವು ವೆಲೆನ್ಸಿಯ ವಿಮಾನ ನಿಲ್ದಾಣ ಸಮೀಪಿಸುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಅದರ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News