ಪಾಕ್ ನಿರ್ಣಯದಲ್ಲಿ ‘ಇಲ್ಲದ 370ನೇ ವಿಧಿಯ ಪ್ರಸ್ತಾವ’: ಪ್ರತಿಪಕ್ಷಗಳ ಪ್ರತಿಭಟನೆ

Update: 2019-08-06 16:35 GMT

ಇಸ್ಲಾಮಾಬಾದ್, ಆ. 6: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಭಾರತ ಸರಕಾರ ಹೊರಡಿಸಿರುವ ಆದೇಶವನ್ನು ಖಂಡಿಸಿ ಪಾಕಿಸ್ತಾನ ಸರಕಾರ ಮಂಡಿಸಿದ ನಿರ್ಣಯದಲ್ಲಿ ‘370ನೇ ವಿಧಿ’ಯ ಪ್ರಸ್ತಾವ ಇಲ್ಲದಿರುವುದನ್ನು ಪಾಕಿಸ್ತಾನದ ಪ್ರತಿಪಕ್ಷಗಳು ಮಂಗಳವಾರ ಪ್ರತಿಭಟಿಸಿವೆ.

ಸರಕಾರ ಮಂಡಿಸಿರುವ ನಿರ್ಣಯದಲ್ಲಿ ‘ಭಾರತೀಯ ಸಂವಿಧಾನದ 370ನೇ ಪರಿಚ್ಛೇದ’ದ ಪ್ರಸ್ತಾವ ಇಲ್ಲ ಎಂದು ಹೇಳಿ, ನಿರ್ಣಯಕ್ಕೆ ಪ್ರತಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಸಂಸತ್ತಿನ ಕೆಳಮನೆ ನ್ಯಾಶನಲ್ ಅಸೆಂಬ್ಲಿಯ ಸ್ಪೀಕರ್ ಅಸಾದ್ ಕೈಸರ್ ಸದನವನ್ನು 20 ನಿಮಿಷಗಳ ಕಾಲ ಮುಂದೂಡಿದರು.

ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದುಪಡಿಸಿರುವುದು ಪ್ರಧಾನ ವಿಷಯವಾಗಿದೆ, ಆದರೆ ನಿರ್ಣಯದಲ್ಲಿ ಅದರ ಪ್ರಸ್ತಾಪವೇ ಇಲ್ಲ. ಅದನ್ನು ಪ್ರಮುಖ ವಿಷಯವಾಗಿಸಬೇಕಾಗಿತ್ತು ಎಂದು ಪ್ರತಿಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸೆನೆಟರ್ ರಝ ರಬ್ಬಾನಿ ಹೇಳಿದರು.

ಸ್ಪೀಕರ್‌ರ ಸೂಚನೆಯಂತೆ ಅಝಮ್ ಸ್ವಟಿ ನಿರ್ಣಯವನ್ನು ತಿದ್ದಿ 370ನೇ ವಿಧಿಯನ್ನು ಸೇರಿಸಿದರು.

‘‘ನಾಗರಿಕರ ವಾಸ ಸ್ಥಳಗಳ ಮೇಲೆ ನಡೆಯುತ್ತಿದೆ ಎನ್ನಲಾದ ಅಪ್ರಚೋದಿತ ಗುಂಡು ಹಾರಾಟ ಮತ್ತು ಶೆಲ್ ದಾಳಿಯಲ್ಲಿನ ಹೆಚ್ಚಳ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಬಳಸುತ್ತಿವೆ ಎನ್ನಲಾದ ಕ್ಲಸ್ಟರ್ ಬಾಂಬ್‌ಗಳ ಬಳಕೆಯ ಬಗ್ಗೆ ಚರ್ಚಿಸಲು’’ ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಸಂಸತ್ತಿನ ವಿಶೇಷ ಜಂಟಿ ಅಧಿವೇಶನವನ್ನು ಕರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News