×
Ad

ವಿಂಡೀಸ್ ಆಲ್‌ರೌಂಡರ್ ಪೊಲಾರ್ಡ್‌ಗೆ ದಂಡ

Update: 2019-08-06 23:39 IST

ದುಬೈ, ಆ.6: ಭಾರತ ವಿರುದ್ಧ ಫ್ಲೋರಿಡಾದಲ್ಲಿ ನಡೆದ ಎರಡನೇ ಅಂತರ್‌ರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅಂಪೈರ್ ಸೂಚನೆಗೆ ಅಗೌರವ ತೋರಿರುವ ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಕಿರೊನ್ ಪೊಲಾರ್ಡ್‌ಗೆ ಪಂದ್ಯಶುಲ್ಕದಲ್ಲಿ 20 ಶೇ. ದಂಡ ಹಾಗೂ ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

 ಪೊಲಾರ್ಡ್ ನಡವಳಿಕೆಯು ಐಸಿಸಿ ನೀತಿ ಸಂಹಿತೆಯ ಲೆವೆಲ್-1ನ್ನು ಉಲ್ಲಂಘಿಸಿದೆ. ಪೊಲಾರ್ಡ್ ನೀತಿ ಸಂಹಿತೆ ವಿಧಿ 2.4ನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.

ಅಂಪೈರ್ ಸೂಚನೆಯ ಹೊರತಾಗಿಯೂ ಪೊಲಾರ್ಡ್ ಬದಲಿ ಆಟಗಾರನನ್ನು ಮೈದಾನಕ್ಕೆ ಕರೆಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದರು. ಮುಂದಿನ ಓವರ್‌ನ ಅಂತ್ಯದ ತನಕ ಕಾಯುವಂತೆ ಅಂಪೈರ್ ಸಲಹೆ ನೀಡಿದರೂ ಪೊಲಾರ್ಡ್, ಅಂಪೈರ್ ಅವರ ಸೂಚನೆಯನ್ನು ಪಾಲಿಸಲು ವಿಫಲರಾಗಿದ್ದರು ಎಂದು ಐಸಿಸಿ ತಿಳಿಸಿದೆ. ವೆಸ್ಟ್‌ಇಂಡೀಸ್ ರವಿವಾರ ನಡೆದ ಮಳೆಬಾಧಿತ 2ನೇ ಟಿ-20 ಪಂದ್ಯವನ್ನು 22 ರನ್‌ಗಳಿಂದ ಸೋತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News