ಮಂಗಳೂರು: ‘ಇನ್‌ಲ್ಯಾಂಡ್ ಪ್ರಾಪರ್ಟಿ’ ಮೇಳಕ್ಕೆ ಚಾಲನೆ

Update: 2019-08-08 07:57 GMT

ಮಂಗಳೂರು, ಆ.8: ಇನ್‌ಲ್ಯಾಂಡ್ ಗ್ರೂಪ್ ವತಿಯಿಂದ ನಗರದ ನವಭಾರತ ಸರ್ಕಲ್‌ನಲ್ಲಿರುವ ಇನ್‌ಲ್ಯಾಂಡ್ ಆರ್ನೇಟ್ ಸಂಕೀರ್ಣದ ಕಚೇರಿಯಲ್ಲಿ ಗುರುವಾರ ನಡೆದ ಸರಳ ಕಾರ್ಯಕ್ರಮದಲ್ಲಿ 19 ದಿನಗಳ ‘ಇನ್‌ಲ್ಯಾಂಡ್ ಪ್ರಾಪರ್ಟಿ’ ಮೇಳಕ್ಕೆ ಚಾಲನೆ ನೀಡಲಾಯಿತು.

ದಾಯ್ಜಿ ವರ್ಲ್ಡ್‌ನ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕ ವಾಲ್ಟರ್ ನಂದಳಿಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಳೆದ 33 ವರ್ಷಗಳಿಂದ ಇನ್‌ಲ್ಯಾಂಡ್ ಬಿಲ್ಡರ್ಸ್‌ ಸಂಸ್ಥೆಯು ವಸತಿ ಸಮುಚ್ಚಯ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆಗೈದಿದೆ. ಜಗತ್ತಿನೆಲ್ಲೆಡೆ ಆರ್ಥಿಕ ಸಂಕಷ್ಟ ಎದುರಾದರೂ ಕೂಡ ಸಂಸ್ಥೆಯ ಆಡಳಿತ ನಿರ್ದೇಶಕ ಹಾಗೂ ಅಧ್ಯಕ್ಷ ಸಿರಾಜ್ ಅಹ್ಮದ್ ಎದೆಗುಂದದೆ ತನ್ನ ಕನಸಿನ ಸಮುಚ್ಚಯಗಳನ್ನು ನಿರ್ಮಿಸುತ್ತಾ ಬಂದಿದ್ದಾರೆ. ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡು ಬಂದರೂ ಅವರು ಗ್ರಾಹಕರ ಅನುಕೂಲತೆಗೆ ತಕ್ಕಂತೆ ಸ್ಪಂದಿಸಿದ್ದಾರೆ.ಅಷ್ಟೇ ಅಲ್ಲ, ಇತರ ಬಿಲ್ಡರ್‌ಗಳಿಗೂ ಮಾದರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮನ್ನಾಳುವ ಸರಕಾರಗಳು ಬಿಲ್ಡರ್‌ಗಳ ಆಶೋತ್ತರಗಳಿಗೆ ಸ್ಪಂದಿಸಲಿ ಎಂದರು.

ಕಾರ್ಪೊರೇಶನ್ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಮತ್ತು ವಲಯ ಮುಖ್ಯಸ್ಥ ಜಗನ್ನಾಥ ಶೆಟ್ಟಿ, ಮಣಿಪಾಲ ಮೀಡಿಯಾದ ರಾಮಚಂದ್ರ ಮಿಜಾರ್ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಇನ್‌ಲ್ಯಾಂಡ್ ಗ್ರೂಪ್‌ನ ನಿರ್ದೇಶಕ ಮೆರಾಜ್ ಯೂಸುಫ್, ಕಳೆದ ವರ್ಷ ನಾವು 19 ದಿನಗಳ ಪ್ರಾಪರ್ಟಿ ಮೇಳವನ್ನು ಆಯೋಜಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸ್ವಂತ ಮನೆಯ ಕನಸನ್ನು ಹೊಂದಿದ ಹಲವಾರು ಮಂದಿ ನಮ್ಮ ಸಂಸ್ಥೆಯ ಕಚೇರಿಗೆ ಆಗಮಿಸಿ ಮಾಹಿತಿ ಪಡೆದುಕೊಂಡರು. ಆ ಪೈಕಿ ಹೆಚ್ಚಿನವರು ಸ್ವಂತ ಫ್ಲಾಟ್ ಖರೀದಿಸಿದರು. ಅಲ್ಲದೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಣ ಹೂಡುವ ಬಗ್ಗೆಯೂ ಅನೇಕ ಮಂದಿ ವಿವರ ಪಡೆದುಕೊಂಡರು. ಈ ಮೇಳದ ಮೂಲಕ ಬ್ಯಾಂಕ್‌ನಿಂದ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನ ಮತ್ತು ನೆರವು ಹಾಗೂ ಮಿತದರದಲ್ಲಿ ಫ್ಲಾಟ್‌ಗಳ ಮಾರಾಟ ಕೂಡ ಸಾಧ್ಯವಾಗಲಿದೆ. ವಿವಿಧ ವಿನ್ಯಾಸದ, ಗ್ರಾಹಕರು ಮನತೃಪ್ತಿ ಹೊಂದುವ ಫ್ಲಾಟ್‌ಗಳನ್ನು ನಿರ್ಮಿಸಿದ ಹೆಗ್ಗಳಿಗೆ ನಮಗಿದ್ದು, ಜನರು ನಗರದ ಹೃದಯ ಭಾಗದಲ್ಲಿ ನೆಲೆಸಲು ಆಶಿಸುತ್ತಿರುವ ಕಾರಣ ಅದಕ್ಕೆ ತಕ್ಕಂತೆ ಸಂಸ್ಥೆಯೂ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ ಎಂದರು.

ಸುದ್ದಿ ಬಿಡುಗಡೆಯ ಮುಹಮ್ಮದ್, ಇನ್‌ಲ್ಯಾಂಡ್ ಬಿಲ್ಡರ್ಸ್‌ ಮತ್ತು ಡೆವಲಪರ್ಸ್‌ ಸಂಸ್ಥೆಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಉಲ್ಲಾಸ್ ಕದ್ರಿ ಉಪಸ್ಥಿತರಿದ್ದರು.
ಸರಸ್ವತಿ ಪ್ರಾರ್ಥಿಸಿದರು. ಪ್ರತಿಮಾ ಸ್ವಾಗತಿಸಿದರು. ಎಲಿಶಾ ವಂದಿಸಿದರು. ಸುನೀಲ್ ಡಿಮೆಲ್ಲೋ ಕಾರ್ಯಕ್ರಮ ನಿರೂಪಿಸಿದರು.


 *ಆ.8ರಿಂದ 26ರವರೆಗೆ ಈ ಮೇಳ ನಡೆಯಲಿದೆ. ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಬಗ್ಗೆಯೂ ಈ ಮೇಳದ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ. ಹೆಚ್ಚಿನವರಿಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹಣ ಹೂಡಲು ಆಸಕ್ತಿ ಇರುತ್ತದೆ. ಆದರೆ ಮಾಹಿತಿ ಇರುವುದಿಲ್ಲ. ಅಂತಹವರಿಗೆ ಮಾಹಿತಿ ಮತ್ತು ಇನ್‌ಲ್ಯಾಂಡ್ ಸಂಸ್ಥೆಯ ವಸತಿ ಸಮುಚ್ಚಯಗಳ ಪರಿಚಯವನ್ನೂ ಈ ಮೂಲಕ ನೀಡಲಾಗುತ್ತದೆ. ಕಳೆದ ಬಾರಿ ನಡೆಸಿದ ಮೇಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಹಾಗಾಗಿ ಈ ಬಾರಿಯೂ ಈ ಮೇಳವನ್ನು ಆಯೋಜಿಸಲಾಗಿದೆ. ಆಸಕ್ತರು ಆ.26ರವರೆಗೆ ಬೆಳಗ್ಗೆ 9:30ರಿಂದ ಸಂಜೆ 7:30ರವರೆಗೆ ಕಚೇರಿಯನ್ನು (ಮೊ.ಸಂ: 9880138015/9972089099/9972014055)ಎಂದು ಇನ್‌ಲ್ಯಾಂಡ್ ಗ್ರೂಪ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News