ದಿಲ್ಲಿಯಲ್ಲಿ ಸೇಲ್ ಅಧ್ಯಕ್ಷರ ಮೇಲೆ ಮಾರಣಾಂತಿಕ ಹಲ್ಲೆ

Update: 2019-08-08 15:21 GMT

ಹೊಸದಿಲ್ಲಿ, ಆ.8: ದೇಶದ ಅತಿದೊಡ್ಡ ಉಕ್ಕು ತಯಾರಿಕೆ ಸಂಸ್ಥೆಯಾಗಿರುವ ಸರಕಾರಿ ಸ್ವಾಮ್ಯದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಸೇಲ್)ದ ಅಧ್ಯಕ್ಷ ಅನಿಲ್ ಕುಮಾರ್ ಚೌಧರಿ ಅವರ ಮೇಲೆ ದಿಲ್ಲಿಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ.

ಬುಧವಾರ ರಾತ್ರಿ ಚೌಧರಿ ಮನೆಗೆ ಮರಳುತ್ತಿದ್ದಾಗ ನಾಲ್ವರು ವ್ಯಕ್ತಿಗಳಿದ್ದ ವಾಹನವು ಅವರ ಕಾರಿಗೆ ಡಿಕ್ಕಿ ಹೊಡೆದಿತ್ತು. ಕಾರಿನಿಂದಿಳಿದ ಚೌಧರಿ ಅವರನ್ನು ಗುಂಪು ಕಬ್ಬಿಣದ ಸರಳುಗಳಿಂದ ಥಳಿಸಿತ್ತು. ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ. ಚೌಧರಿಯವರನ್ನು ಏಮ್ಸ್‌ನ ಟ್ರಾಮಾ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ ಎಂದು ಸೇಲ್ ತಿಳಿಸಿದೆ.

ಸೇಲ್ ತನ್ನ ಜೂನ್ ತ್ರೈಮಾಸಿಕದ ಹಣಕಾಸು ಫಲಿತಾಂಶಗಳನ್ನು ಶುಕ್ರವಾರ ಪ್ರಕಟಿಸಲಿದೆ.

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಹೌಝ್ ಖಾಸ್ ಪೊಲೀಸರು ಹಲ್ಲೆಕೋರರ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News