ಜಮ್ಮು ಕಾಶ್ಮೀರ ವಿಚಾರದಲ್ಲಿ ಹಸ್ತಕ್ಷೇಪ: ಪಾಕ್ ಮನವಿಯನ್ನು ತಿರಸ್ಕರಿಸಿದ ವಿಶ್ವ ಸಂಸ್ಥೆ

Update: 2019-08-09 07:17 GMT

ವಾಷಿಂಗ್ಟನ್ : ಕಾಶ್ಮೀರ ವಿಚಾರವನ್ನು ದ್ವಿಪಕ್ಷೀಯವಾಗಿ 1972ರ ಶಿಮ್ಲಾ ಒಪ್ಪಂದದ ಅನುಸಾರ ಶಾಂತಿಯುತವಾಗಿ ವಿಶ್ವ ಸಂಸ್ಥೆಯ ಮಾರ್ಗ ಸೂಚಿಯನ್ವಯ ಪರಿಹರಿಸಬೇಕೆಂದು ಹೇಳಿರುವ ವಿಶ್ವ ಸಂಸ್ಥೆಯ ಸೆಕ್ರಟರಿ ಜನರಲ್ ಆಂಟೋನಿಯೋ ಗಟ್ಟೆರೆಸ್,  ಗರಿಷ್ಠ ಸಂಯಮ ತೋರುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ಕರೆ ನೀಡಿದ್ದಾರೆ.

ಭಾರತ ಸರಕಾರ ಜಮ್ಮು ಕಾಶ್ಮಿರದಲ್ಲಿ 370ನೇ ವಿಧಿ ರದ್ದುಗೊಳಿಸಿ ಕೈಗೊಂಡ ನಿರ್ಧಾರದ ನಂತರ ಪಾಕಿಸ್ತಾನವು ವಿಶ್ವ ಸಂಸ್ಥೆ ಹಾಗೂ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರ ಬರೆದು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದ್ದರ ಹಿನ್ನೆಲೆಯಲ್ಲಿ ಸೆಕ್ರಟರಿ ಜನರಲ್ ಅವರ ಈ ಹೇಳಿಕೆ ಬಂದಿದ್ದು ಪಾಕಿಸ್ತಾನದ ಬೇಡಿಕೆಯನ್ನು ವಿಶ್ವ ಸಂಸ್ಥೆ ತಿರಸ್ಕರಿಸಿದೆ ಎಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗಿದೆ.

'ಸೆಕ್ರಟರಿ ಜನರಲ್ ಅವರು  ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಕಾಳಜಿಯಿಂದ  ಅವಲೋಕಿಸುತ್ತಿದ್ದಾರೆ ಹಾಗೂ ಗರಿಷ್ಠ ಸಂಯಮಕ್ಕೆ ಕರೆ ನೀಡಿದ್ದಾರೆ,'' ಎಂದು  ಅವರ ವಕ್ತಾರ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

''ಕಾಶ್ಮೀರದಲ್ಲಿ  ಹೇರಲಾಗಿರುವ ನಿರ್ಬಂಧಗಳ ಕುರಿತಂತೆ ಸೆಕ್ರಟರಿ ಜನರಲ್ ಕಳವಳ ಹೊಂದಿದ್ದಾರೆ ಹಾಗೂ ಇದು ಆ ಪ್ರದೇಶದಲ್ಲಿ ಮಾನವ ಹಕ್ಕು ಉಲ್ಲಂಘನೆಗಳ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಸೆಕ್ರಟರಿ ಜನರಲ್ ಅಭಿಪ್ರಾಯ ಪಟ್ಟಿದ್ದಾರೆಂದು'' ಹೇಳಿಕೆ ತಿಳಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News