25 ಲಕ್ಷ ಮುಸ್ಲಿಮರಿಂದ ಹಜ್ ಯಾತ್ರೆ ಆರಂಭ

Update: 2019-08-09 15:32 GMT

ಮಕ್ಕಾ (ಸೌದಿ ಅರೇಬಿಯ), ಆ. 9: ಜಗತ್ತಿನೆಲ್ಲೆಡೆಯಿಂದ ಬಂದಿರುವ ಸುಮಾರು 25 ಲಕ್ಷ ಮುಸ್ಲಿಮರು ಶುಕ್ರವಾರ ವಾರ್ಷಿಕ ಹಜ್ ಯಾತ್ರೆ ಆರಂಭಿಸಿದ್ದಾರೆ.

ಜಗತ್ತಿನ ಬೃಹತ್ ಧಾರ್ಮಿಕ ಸಮಾವೇಶಗಳಲ್ಲಿ ಒಂದಾಗಿರುವ ಹಜ್, ಇಸ್ಲಾಮ್‌ನ ಅತ್ಯಂತ ಪವಿತ್ರ ನಗರ (ಮಕ್ಕಾ) ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಐದು ದಿನಗಳ ಕಾಲ ನಡೆಯಲಿದೆ.

 ಮಕ್ಕಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ ಬಳಿಕ ಯಾತ್ರಿಗಳು ಕಾಬಾಕ್ಕೆ ಏಳು ಸುತ್ತು ಪ್ರದಕ್ಷಿಣೆ ಬಂದರು. ಬಳಿಕ, ರಾಷ್ಟ್ರೀಯತೆಯ ಆಧಾರದಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ಗುಂಪುಗಳಲ್ಲಿ ಪವಿತ್ರ ನಗರ ಮಿನಾಕ್ಕೆ ಕಾಲ್ನಡಿಗೆಯಲ್ಲಿ ಅಥವಾ ಬಸ್‌ಗಳಲ್ಲಿ ಪ್ರಯಾಣಿಸಿದರು.

‘‘ಸುಮಾರು 3.50 ಲಕ್ಷ ಹವಾನಿಯಂತ್ರಿತ ಡೇರೆಗಳನ್ನು ನಿರ್ಮಿಸಲಾಗಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಯಾತ್ರಿಗಳು ಗಂಟೆಗಳ ಕಾಲ ಅರಫಾತ್ ಬೆಟ್ಟದಲ್ಲಿ ಕಳೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News