ಎಫ್‌ಎಟಿಎಫ್ ರಕ್ಷಣಾ ಕ್ರಮಗಳನ್ನು ವಿಸ್ತರಿಸಲು ಪಾಕ್‌ಗೆ ಅಮೆರಿಕ ಒತ್ತಾಯ

Update: 2019-08-09 15:58 GMT

ಇಸ್ಲಾಮಾಬಾದ್, ಆ. 9: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದಕ್ಕೆ ಸಂಬಂಧಿಸಿದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ನಿಯಮಾವಳಿಗಳನ್ನು ಆರ್ಥಿಕತೆಯ ಅನೌಪಚಾರಿಕ ಕ್ಷೇತ್ರಗಳಿಗೂ ವಿಸ್ತರಿಸುವಂತೆ ಅಮೆರಿಕ ಪಾಕಿಸ್ತಾನವನ್ನು ಒತ್ತಾಯಿಸಿದೆ.

 ಟಾಸ್ಕ್ ಫೋರ್ಸ್‌ನ 27 ಅಂಶಗಳ ಕ್ರಿಯಾ ಯೋಜನೆಯ ಜಾರಿಯಲ್ಲಿ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ ಎಂಬ ಕಳವಳವನ್ನು ಅಮೆರಿಕ ವ್ಯಕ್ತಪಡಿಸಿದೆ.

ಕ್ರಿಯಾ ಯೋಜನೆಯ ವಾಸ್ತವಿಕ ಜಾರಿಯ ಮೇಲೆ ನಿಗಾ ಇಡುತ್ತಿರುವ ಅಮೆರಿಕದ ನಿಯೋಗವೊಂದು ಬುಧವಾರ ಈ ವಿಷಯವನ್ನು ಪಾಕಿಸ್ತಾನದ ಸಚಿವ ಹಮ್ಮದ್ ಅಝರ್ ಬಳಿ ಪ್ರಸ್ತಾಪಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News