ವಾವೇ ಜೊತೆ ವ್ಯವಹಾರ ಮಾಡುವುದಿಲ್ಲ: ಟ್ರಂಪ್

Update: 2019-08-10 15:50 GMT

ವಾಶಿಂಗ್ಟನ್, ಆ. 10: ಚೀನಾದ ಬೃಹತ್ ತಂತ್ರಜ್ಞಾನ ಕಂಪೆನಿ ವಾವೇ ಜೊತೆಗೆ ಅಮೆರಿಕ ಯಾವುದೇ ವ್ಯವಹಾರ ಮಾಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.

ಸರಕಾರಿ ನಿಯಂತ್ರಣದ ವಾವೇಗೆ 5ಜಿ ಜಾಲಕ್ಕೆ ಪ್ರವೇಶ ನೀಡಿದರೆ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗುತ್ತದೆ ಎಂದು ಟ್ರಂಪ್ ಆಡಳಿತ ಭಾವಿಸಿದೆ. ಹಾಗಾಗಿ, ಟ್ರಂಪ್ ಆಡಳಿತವು ವಾವೇಗೆ ಅಮೆರಿಕ ಪ್ರವೇಶವನ್ನು ನಿಷೇಧಿಸಿರುವುದು ಮಾತ್ರವಲ್ಲ, ಅದನ್ನು ಬಹಿಷ್ಕರಿಸುವಂತೆ ಇತರ ದೇಶಗಳನ್ನೂ ಒತ್ತಾಯಿಸುತ್ತಿದೆ.

‘‘ನಾವು ವಾವೇ ಜೊತೆಗೆ ವ್ಯವಹಾರ ಮಾಡುವುದಿಲ್ಲ. ಈ ಬಗ್ಗೆ ನಾನು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ವಾವೇ ಜೊತೆಗೆ ವ್ಯವಹಾರ ಮಾಡದಿರುವುದು ತುಂಬಾ ಸರಳ ವಿಷಯ. ಹಾಗಾಗಿ, ನಾವು ವಾವೇ ಜೊತೆ ವ್ಯವಹಾರ ಮಾಡುತ್ತಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News