ಟ್ವೆಂಟಿ-20:ಅಝಮ್ ಮಿಂಚಿನ ಶತಕ

Update: 2019-08-10 18:05 GMT

ಲಂಡನ್, ಆ.10: ಸಾಮರ್‌ಸೆಟ್‌ನ ಬ್ಯಾಟ್ಸ್‌ಮನ್ ಪಾಕಿಸ್ತಾನದ ಬಾಬರ್ ಅಝಮ್ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟ್ವೆಂಟಿ-20 ಬ್ಲಾಸ್ಟ್ ಟೂರ್ನಮೆಂಟ್‌ನಲ್ಲಿ ವೃತ್ತಿಜೀವನದ ಎರಡನೇ ಶತಕ ದಾಖಲಿಸಿದ್ದಾರೆ.

ಅಝಮ್ ಶತಕದ ನೆರವಿನಲ್ಲಿ ಸಾಮರ್‌ಸೆಟ್ ತಂಡ ಹ್ಯಾಂಪ್‌ಶೈರ್ ವಿರುದ್ಧ ಜಯ ಗಳಿಸಿದೆ.

   ಬಾಬರ್ ಕೇವಲ 55 ಎಸೆತಗಳಲ್ಲಿ 102 ರನ್ ದಾಖಲಿಸಿದರು. ಬಾಬರ್ ಶತಕದ ನೆರವಿನಲ್ಲಿ ಸಾಮರ್‌ಸೆಟ್ ತಂಡ 4 ವಿಕೆಟ್ ನಷ್ಟದಲ್ಲಿ 202 ರನ್ ಗಳಿಸಿತ್ತು. ಅಷ್ಟೇ ಅಲ್ಲ ಬಾಬರ್ ಎರಡು ಕ್ಯಾಚ್ ಪಡೆದಿದ್ದರು. ಇದರಿಂದಾಗಿ ಎದುರಾಳಿ ಹ್ಯಾಂಪ್‌ಶೈರ್ ತಂಡ 12.1 ಓವರ್‌ಗಳಲ್ಲಿ 69 ರನ್ ಗಳಿಸುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಳಿಕ ಆಟ ಮಳೆಯಿಂದಾಗಿ ಸ್ಥಗಿತಗೊಂಡಿತು. ಸಾಮರ್‌ಸೆಟ್ ಗೆಲುವಿನ ನಗೆ ಬೀರಿತು. ಬಾಬರ್ ಅಝಮ್ ಈ ವರೆಗೆ 8 ಇನಿಂಗ್ಸ್‌ಗಳಲ್ಲಿ 425 ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News