ಕುಸ್ತಿ ಸ್ಪರ್ಧೆ: ಬಜರಂಗ್‌ಗೆ ಚಿನ್ನ

Update: 2019-08-10 18:07 GMT

ಹೊಸದಿಲ್ಲಿ, ಆ.10: ಭಾರತದ ಅಗ್ರಮಾನ್ಯ ಕುಸ್ತಿಪಟುಗಳು ಈ ಋತುವಿನಲ್ಲಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದಾರೆ. ಬಜರಂಗ್ ಪೂನಿಯಾ ಟಿಬಿಲಿಸಿ ಗ್ರಾನ್ ಪ್ರಿನಲ್ಲಿ ಚಿನ್ನ ಜಯಿಸಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು. ಬೆಲಾರಸ್‌ನಲ್ಲಿ ನಡೆದ ಮೆಡ್‌ವೆಡ್ ಇವೆಂಟ್‌ನಲ್ಲಿ ವಿನೇಶ್ ಫೋಗಾಟ್ ಫೈನಲ್‌ಗೆ ತಲುಪಿದ್ದಾರೆ. ಜಾರ್ಜಿಯದ ರಾಜಧಾನಿ ಟಿಬಿಲಿಸಿಯಲ್ಲಿ ನಡೆದ ಪುರುಷರ ಫ್ರೀಸ್ಟೈಲ್ ಸ್ಪರ್ಧೆಯ 65 ಕೆಜಿ ವಿಭಾಗದ ಫೈನಲ್‌ನಲ್ಲಿ ಬಜರಂಗ್ ಇರಾನ್‌ನ ಪೀಮಾನ್ ಬಿಬ್‌ಯಾನಿ ಅವರನ್ನು 2-0 ಅಂತರದಿಂದ ಮಣಿಸಿದರು.

ಏಶ್ಯನ್ ಗೇಮ್ಸ್ ಚಾಂಪಿಯನ್ ಬಜರಂಗ್ ಈ ಋತುವಿನಲ್ಲಿ ನಾಲ್ಕನೇ ಚಿನ್ನದ ಜಯಿಸಿದರು. ಬೆಲಾರಸ್‌ನಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್ 53 ಕೆಜಿ ಸೆಮಿ ಫೈನಲ್‌ನಲ್ಲಿ ಸ್ಥಳೀಯ ಕುಸ್ತಿತಾರೆ ಯಫ್ರೆಮೆಂಕಾರನ್ನು 11-0 ಅಂತರದಿಂದ ಮಣಿಸಿದ್ದಾರೆ. ಈ ಮೂಲಕ ಸತತ 4ನೇ ಚಿನ್ನ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದಾರೆ.

ವಿನೇಶ್ ಫೈನಲ್‌ನಲ್ಲಿ ರಶ್ಯದ ಮಲಿಶೆವಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News