ಮಿಯಾಂದಾದ್ ದಾಖಲೆ ಮುರಿಯುವತ್ತ ಕೊಹ್ಲಿ ಚಿತ್ತ

Update: 2019-08-10 18:16 GMT

ಪೋರ್ಟ್ ಆಫ್ ಸ್ಪೇನ್, ಆ.10: ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಕಲೆ ಹಾಕಿರುವ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರ ದಾಖಲೆ ಮುರಿಯಲು ಭಾರತದ ನಾಯಕ ವಿರಾಟ್ ಕೊಹ್ಲಿಗೆ ಇನ್ನು ಕೇವಲ 19 ರನ್ ಅಗತ್ಯವಿದೆ.

 ಮಿಯಾಂದಾದ್ 1993ರಲ್ಲಿ ವಿಂಡೀಸ್ ವಿರುದ್ಧ ಕೊನೆಯ ಏಕದಿನಪಂದ್ಯ ಆಡಿದ್ದರು. ಪೋರ್ಟ್ ಆಫ್ ಸ್ಪೇನ್‌ನಲ್ಲಿ ಶನಿವಾರ ನಡೆಯಲಿರುವ ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 19 ರನ್ ಗಳಿಸಿದ ತಕ್ಷಣ 26 ವರ್ಷ ಹಳೆಯ ದಾಖಲೆಯೊಂದನ್ನು ಮುರಿಯಲಿದ್ದಾರೆ.

  ಮಿಯಾಂದಾದ್ ವಿಂಡೀಸ್ ವಿರುದ್ಧ 64 ಇನಿಂಗ್ಸ್ಸ್‌ಗಳಲ್ಲಿ 1,930 ರನ್ ಗಳಿಸಿದ್ದಾರೆ. ಒಂದು ವೇಳೆ ಕೊಹ್ಲಿ 2ನೇ ಏಕದಿನದಲ್ಲಿ ಮಿಯಾಂದಾದ್ ದಾಖಲೆ ಮುರಿದರೆ, ಕೇವಲ 34 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದಂತಾಗುತ್ತದೆ.

ಭಾರತದ ನಾಯಕ ಕೊಹ್ಲಿಗೆ ಮೊದಲ ಪಂದ್ಯ ಆಡಲು ಸಾಧ್ಯವಾಗಿಲ್ಲ. ಮೊದಲ ಪಂದ್ಯ ಮಳೆಗಾಹುತಿಯಾಗಿತ್ತು. ಕೇವಲ 12 ಓವರ್‌ಗಳ ಪಂದ್ಯ ಆಡಲು ಸಾಧ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News