ಸೇನೆಯಲ್ಲಿ ಪುರುಷ ಸಿಬ್ಬಂದಿಗೆ ಮಕ್ಕಳ ಆರೈಕೆ ರಜೆ ಸೌಲಭ್ಯಕ್ಕೆ ಸಮ್ಮತಿ

Update: 2019-08-10 18:16 GMT

ಹೊಸದಿಲ್ಲಿ, ಆ.10: ಮಗುವಿನ ಏಕಪೋಷಕ ಪುರುಷ ಸಿಬ್ಬಂದಿಗಳಿಗೂ ಮಕ್ಕಳ ಆರೈಕೆ ರಜಾ ಸೌಲಭ್ಯವನ್ನು ವಿಸ್ತರಿಸುವುದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿ ಸೂಚಿಸಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಅಲ್ಲದೆ ರಕ್ಷಣಾ ಪಡೆಗಳಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಮಕ್ಕಳ ಆರೈಕೆ ರಜೆ (ಸಿಸಿಎಲ್)ಪಡೆಯಲಿರುವ ಕೆಲವು ಶರತ್ತುಗಳಿಂದ ವಿನಾಯಿತಿ ನೀಡಲೂ ರಕ್ಷಣಾ ಸಚಿವರು ಸಮ್ಮತಿಸಿದ್ದಾರೆ. ಒಂದು ಬಾರಿಗೆ ಕನಿಷ್ಟ 15 ಸಿಸಿಎಲ್ ಪಡೆಯಬೇಕೆಂಬ ನಿಯಮದಲ್ಲಿ ವಿನಾಯಿತಿ ನೀಡಿ ಕನಿಷ್ಟ 5 ಸಿಸಿಎಲ್ ಎಂದು ಸೂಚಿಸಲಾಗಿದೆ. ಅಲ್ಲದೆ ಶೇ.40ರಷ್ಟು ಅಂಗವೈಕಲ್ಯ ಹೊಂದಿದ ಮಕ್ಕಳು ಎಂಬ ಕಾರಣಕ್ಕೆ ರಜೆ ಪಡೆಯಲು ತಾಯಿಯ ವಯಸ್ಸು 22 ವರ್ಷದೊಳಗೆ ಇರಬೇಕು ಎಂಬ ನಿಯಮದಿಂದಲೂ ವಿನಾಯಿತಿ ನೀಡಲಾಗಿದೆ.

ಇದುವರೆಗೆ ರಕ್ಷಣಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳಿಗೆ ಮಾತ್ರ ಮಕ್ಕಳ ಆರೈಕೆ ರಜೆಯ ಸೌಲಭ್ಯ ದೊರಕುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News