×
Ad

ಕೊಚ್ಚಿ ಏರ್‌ಪೋರ್ಟ್‌ನಲ್ಲಿ ಮತ್ತೆ ವಿಮಾನ ಹಾರಾಟ ಆರಂಭ

Update: 2019-08-11 13:46 IST

ಕೊಚ್ಚಿ, ಆ.11: ಭಾರೀ ಮಳೆಯಿಂದಾಗಿ ರನ್‌ವೇಯಲ್ಲಿ ನೀರು ತುಂಬಿದ್ದ ಕಾರಣ ಎರಡು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ಕೊಚ್ಚಿಯ ಅಂತರ್‌ರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ಇಂದು ಪುನರಾರಂಭವಾಗಿದೆ. ಅಬುಧಾಬಿ-ಕೊಚ್ಚಿ ಇಂಡಿಗೊ ವಿಮಾನ ಮಧ್ಯಾಹ್ನ 12:15ರ ಸುಮಾರಿಗೆ ನಿಲ್ದಾಣಕ್ಕೆ ಬಂದಿಳಿದಿದೆ. ಈಮೂಲಕ ವಿಮಾನಗಳ ಕಾರ್ಯಾಚರಣೆ ಆರಂಭವಾಗಿದೆ ಎಂದು ಕೊಚ್ಚಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರೀ ಪ್ರವಾಹದಿಂದಾಗಿ ಏರ್‌ಪೋರ್ಟ್‌ನ ರನ್‌ವೇ ಜಲಾವೃತಗೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ರವಿವಾರ ಮಧ್ಯಾಹ್ನ 3ರ ತನಕ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

2018ರ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಶತಮಾನದಲ್ಲಿ ಅತ್ಯಂತ ಕೆಟ್ಟ ಪ್ರವಾಹ ಸಂಭವಿಸಿದಾಗ ಕೊಚ್ಚಿ ಏರ್‌ಪೋರ್ಟ್ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News