ಪ್ರವಾಹದ ನೀರಿನಲ್ಲಿ ಬಾಲಕಿಯರನ್ನು ಭುಜದ ಮೇಲೆ ಹೊತ್ತು 1.5 ಕಿ.ಮೀ. ನಡೆದ ಪೊಲೀಸ್ ಕಾನ್ ಸ್ಟೇಬಲ್

Update: 2019-08-11 10:19 GMT

ಹೊಸದಿಲ್ಲಿ, ಆ.11: ಪ್ರವಾಹಪೀಡಿತ ಗುಜರಾತ್ ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರವಾಹದ ನೀರಿನಲ್ಲಿ ಇಬ್ಬರು ಬಾಲಕಿಯರನ್ನು ಭುಜದ ಮೇಲೆ ಹೊತ್ತು 1.5 ಕಿ.ಮೀ. ನಡೆದು ರಕ್ಷಣಾ ಕಾರ್ಯ ನಡೆಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸೊಂಟದವರೆಗೆ ನೀರಿದ್ದರೂ ಯಾವುದಕ್ಕೂ ಅಂಜದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಬಾಲಕಿಯರನ್ನು ಹೊತ್ತು 1.5 ಕಿ.ಮೀ. ದೂರ ನಡೆದಿದ್ದಾರೆ. ಈ ಕಾನ್ಸ್ ಸ್ಟೇಬಲ್ ರನ್ನು ಪೃಥ್ವಿರಾಜ್ ಸಿಂಗ್ ಜಡೇಜ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News