ಹಾಂಕಾಂಗ್‌ನಲ್ಲಿ ಹಸ್ತಕ್ಷೇಪ ನಿಲ್ಲಿಸಿ: ಬ್ರಿಟನ್‌ಗೆ ಚೀನಾ ಒತ್ತಾಯ

Update: 2019-08-11 16:22 GMT

ಬೀಜಿಂಗ್, ಆ. 11: ಹಾಂಕಾಂಗ್‌ನ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದನ್ನು ನಿಲ್ಲಿಸುವಂತೆ ಚೀನಾ ಬ್ರಿಟನ್‌ಗೆ ಎಚ್ಚರಿಕೆ ನೀಡಿದೆ. ಎರಡು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಲು ಬ್ರಿಟನ್‌ನ ವಿದೇಶ ಕಾರ್ಯದರ್ಶಿ ಹಾಂಕಾಂಗ್ ನಾಯಕಿಗೆ ಫೋನ್ ಕರೆ ಮಾಡಿದ ಬಳಿಕ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ಹಾಂಕಾಂಗ್‌ನಲ್ಲಿ ಸ್ವಾತಂತ್ರ ಕಡಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ಆಕ್ರೋಶ ಎರಡು ತಿಂಗಳುಗಳಿಂದ ಬೃಹತ್ ಪ್ರತಿಭಟನೆಗಳಾಗಿ ಪರಿವರ್ತನೆಯಾಗಿವೆ. ನಗರವು 1997ರಲ್ಲಿ ಬ್ರಿಟಿಶರಿಂದ ಚೀನಾಕ್ಕೆ ಹಸ್ತಾಂತರಗೊಂಡಂದಿನಿಂದ, ಚೀನಾವು ಅತಿ ದೊಡ್ಡ ಸವಾಲನ್ನು ಎದುರಿಸುತ್ತಿದೆ.

ಬ್ರಿಟನ್ ವಿದೇಶ ಕಾರ್ಯದರ್ಶಿ ಡೋಮಿನಿಕ್ ರಾಬ್ ಶುಕ್ರವಾರ ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್‌ಗೆ ಫೋನ್ ಕರೆ ಮಾಡಿದ್ದಾರೆ ಹಾಗೂ ಹಾಂಕಾಂಗ್‌ನಲ್ಲಿ ನಡೆದ ಇತ್ತೀಚಿನ ಘಟನೆಗಳ ಬಗ್ಗೆ ಪೂರ್ಣ ಪ್ರಮಾಣದ ಸ್ವತಂತ್ರ ತನಿಖೆ ನಡೆಸುವ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದಾರೆ.

ಇದಕ್ಕೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ. ‘‘ಹಾಂಕಾಂಗ್ ವ್ಯವಹಾರಗಳಲ್ಲಿ ಹಾಗೂ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಎಲ್ಲ ಕ್ರಮಗಳನ್ನು ಬ್ರಿಟನ್ ತಕ್ಷಣ ನಿಲ್ಲಿಸಬೇಕೆಂದು ಚೀನಾಒತ್ತಾಯಿಸುತ್ತದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರೆ ಹುವಾ ಚುನ್‌ಯಿಂಗ್ ಶನಿವಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News