ಆರ್‌ಸ್ಸೆಸ್ ಸಿದ್ಧಾಂತವನ್ನು ನಾಝಿ ಸಿದ್ಧಾಂತಕ್ಕೆ ಹೋಲಿಸಿದ ಇಮ್ರಾನ್ ಖಾನ್

Update: 2019-08-11 16:36 GMT

ಇಸ್ಲಾಮಾಬಾದ್, ಆ. 11: ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರವಿವಾರ ಕಿಡಿಗಾರಿದ್ದಾರೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸಿದ್ಧಾಂತವವನ್ನು ನಾಝಿ ಸಿದ್ಧಾಂತಕ್ಕೆ ಹೋಲಿಸಿದ್ದಾರೆ.

‘ಹಿಂದೂಗಳು ಶ್ರೇಷ್ಠರು ಎನ್ನುವ ಆರ್‌ಸ್ಸೆಸ್ ಸಿದ್ಧಾಂತವು ನಾಝಿಗಳ ಆರ್ಯರು ಶ್ರೇಷ್ಠರು ಎನ್ನುವ ಸಿದ್ಧಾಂತಕ್ಕೆ ಸಮವಾಗಿದೆ. ಇದು ಐಒಕೆ (ಭಾರತ ಆಕ್ರಮಿತ ಕಾಶ್ಮೀರ)ದಲ್ಲಿ ನಿಲ್ಲುವುದಿಲ್ಲ ಎಂಬ ಭಯ ನನಗಿದೆ. ಬದಲಿಗೆ, ಅದು ಭಾರತದ ಮುಸ್ಲಿಮರ ದಮನವನ್ನು ಕೈಗೆತ್ತಿಕೊಳ್ಳಲಿದೆ ಹಾಗೂ ಅಂತಿಮವಾಗಿ ಪಾಕಿಸ್ತಾನವನ್ನು ಗುರಿಯಾಗಿಸುತ್ತದೆ’’ ಎಂದು ಇಮ್ರಾನ್ ಟ್ವೀಟ್ ಮಾಡಿದ್ದಾರೆ.

‘‘ಹಿಂದೂ ಶ್ರೇಷ್ಠತಾವಾದಿಗಳು ಹಿಟ್ಲರ್‌ನ ಲೆಬನ್‌ಸ್ರಾಮ್‌ನ ಇನ್ನೊಂದು ರೂಪ’’ ಎಂದರು.

‘‘ಐಒಕೆಯಲ್ಲಿ ಹೇರಲಾಗಿರುವ ಕರ್ಫ್ಯೂ ಮತ್ತು ನಡೆಯುತ್ತಿರುವ ಕಾಶ್ಮೀರಿಗಳ ದಮನ ಹಾಗೂ ಮುಂದೆ ನಡೆಯಲಿರುವ ಜನಾಂಗೀಯ ಹತ್ಯೆ- ಎಲ್ಲವೂ ನಾಝಿ ಸಿದ್ಧಾಂತದಿಂದ ಪ್ರೇರಣೆ ಪಡೆದ ಆರ್‌ಎಸ್‌ಎಸ್ ಸಿದ್ಧಾಂತದಂತೆ ನಿಖರವಾಗಿ ನಡೆಯುತ್ತಿದೆ’’ ಎಂದು ಇ್ರಮಾನ್ ನುಡಿದರು.

 ‘‘ಜನಾಂಗೀಯ ಹತ್ಯೆ ಮೂಲಕ ಕಾಶ್ಮೀರದ ಜನಸಂಖ್ಯೆಯನ್ನು ಬದಲಿಸುವ ಪ್ರಯತ್ನ ಮಾಡಲಾಗುತ್ತಿದೆ’’ ಪಾಕ್ ಪ್ರಧಾನಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News