ವ್ಯಾಪಾರ ಒಪ್ಪಂದ ಮಾಡಲು ಚೀನಾ ಉತ್ಸುಕ: ಟ್ರಂಪ್

Update: 2019-08-11 16:48 GMT

ವಾಶಿಂಗ್ಟನ್, ಆ. 11: ಅಮೆರಿಕದೊಂದಿಗಿನ ವ್ಯಾಪಾರ ಸಂಘರ್ಷವನ್ನು ಕೊನೆಗೊಳಿಸಲು ಚೀನಾವು ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವೊಂದನ್ನು ಏರ್ಪಡಿಸಲು ಉತ್ಸುಕವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.

ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟ್ ವ್ಯಕ್ತಿಯೊಬ್ಬರು ಅಧ್ಯಕ್ಷರಾಗುವುದನ್ನು ಬಹುಶಃ ಬೀಜಿಂಗ್ ಎದುರು ನೋಡುತ್ತಿದೆ ಎಂದು ಟ್ರಂಪ್ ವ್ಯಂಗ್ಯವಾಡಿದರು.

‘‘ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು ಚೀನಾಕ್ಕೆ ಅಗತ್ಯವಾಗಿದೆ. ರಫ್ತು ತೆರಿಗೆಯಿಂದಾಗಿ ಸಾವಿರಾರು ಕಂಪೆನಿಗಳು ಹೊರಹೋಗುತ್ತಿವೆ. ಅವರು ಅದನ್ನು ತಡೆಯಬೇಕಾಗಿದೆ. ಅದೇ ವೇಳೆ, ಅಮೆರಿಕವನ್ನು ದೋಚುವುದನ್ನು ಮುಂದುವರಿಸುವುದಕ್ಕಾಗಿ ಡೆಮಾಕ್ರಟಿಕ್ ವ್ಯಕ್ತಿಯೊಬ್ಬರು ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಿಯಾಗುವುದನ್ನು ಬಹುಶಃ ಚೀನಾ ಎದುರು ನೋಡುತ್ತಿದೆ’’ ಎಂದು ಟ್ರಂಪ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News