ಭಾರತ ಸಂಪೂರ್ಣ ಪ್ರಾಬಲ್ಯ

Update: 2019-08-11 18:33 GMT

ಹೈದರಾಬಾದ್, ಆ.11: ಬಲ್ಗೇರಿಯ ಜೂನಿಯರ್ ಅಂತರ್‌ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ಭಾರತದ ಜೂನಿಯರ್‌ಗಳು ಮೂರು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಜಯಿಸುವುದರೊಂದಿಗೆ ಸಂಪೂರ್ಣ ಪ್ರಾಬಲ್ಯ ಮೆರೆದರು.

ಹೈದರಾಬಾದ್‌ನ ಸಮಿಯಾ ಇಮಾದ್ ಫಾರೂಕಿ ಫೈನಲ್‌ನಲ್ಲಿ ಅನಸ್ತೇಸಿಯ ಶಪೊವಾಲೊವಾರನ್ನು 9-21, 21-12, 22-20 ಅಂತರದಿಂದ ಮಣಿಸಿ ಬಾಲಕಿಯರ ಸಿಂಗಲ್ಸ್‌ನಲ್ಲಿಚಿನ್ನ ಜಯಿಸಿದರು.

 ಬಾಲಕಿಯರ ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ ಹಾಗೂ ಅದಿತಿ ಭಟ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಎಡ್ವಿನ್ ಜಾಯ್ ಹಾಗೂ ಶುೃತಿ ಮಿಶ್ರಾ ಚಿನ್ನದ ಪದಕ ತನ್ನದಾಗಿಸಿಕೊಂಡರು.

ತನಿಷಾ ಹಾಗೂ ಅದಿತಿ ಟರ್ಕಿಯ ಬೆಂಗಿಸು ಎರ್ಸಿಟಿನ್ ಹಾಗೂ ಝೆಹ್ರಾ ಎರ್ಡೆಮ್‌ರನ್ನು 21-15, 18-21, 21-18 ಗೇಮ್‌ಗಳ ಅಂತರದಿಂದ ಸೋಲಿಸಿದರು.

ಎಡ್ವಿನ್ ಜಾಯ್ ಹಾಗೂ ಶುೃತಿ ಬ್ರಿಟನ್‌ನ ಎರಡನೇ ಶ್ರೇಯಾಂಕದ ಬ್ರೆಂಡನ್ ಝಿ ಹಾಗೂ ಅಬಿಗಾಲ್ ಹ್ಯಾರಿಸ್ ವಿರುದ್ಧ 21-14, 21-17 ಅಂತರದಿಂದ ಜಯ ಸಾಧಿಸಿದರು.

ಬಾಲಕರ ಡಬಲ್ಸ್ ಫೈನಲ್‌ನಲ್ಲಿ ಭಾರತದ ನಾಲ್ಕನೇ ಶ್ರೇಯಾಂಕದ ಇಶಾನ್ ಭಟ್ನಗರ್ ಹಾಗೂ ವಿಷ್ಣು ವರ್ದನ್ ಗೌಡ್ ಬ್ರಿಟನ್‌ನ ವಿಲಿಯಂ ಜೋನ್ಸ್ ಹಾಗೂ ಬ್ರೆಂಡನ್ ಝಿ ಅವರ ವಿರುದ್ಧ 19-21 ಹಾಗೂ 18-21 ಅಂತರದಿಂದ ಸೋತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News