×
Ad

ಗಿನ್ನೆಸ್ ದಾಖಲೆ ಸೇರಿದ ಈ ತ್ರಿವರ್ಣಧ್ವಜದ ಉದ್ದ ಎಷ್ಟು ಗೊತ್ತೇ?

Update: 2019-08-12 13:18 IST

ರಾಯಪುರ, ಆ. 12: ಸ್ವಾತಂತ್ರ್ಯದಿನಾಚರಣೆಗೆ ಪೂರ್ವಭಾವಿಯಾಗಿ ಛತ್ತೀಸ್‌ಗಢ ರಾಜಧಾನಿಯಲ್ಲಿ ಸೇರಿದ ಸಾವಿರಾರು ಮಂದಿ ವಿದ್ಯಾರ್ಥಿಗಳು ಹಾಗೂ ನೂರಾರು ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಮಾನವ ಸರಪಣಿ ನಿರ್ಮಿಸಿ 15 ಕಿಲೋಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಿದರು.

ವಸುದೈವ ಕುಟುಂಬಕಂ ಪ್ರತಿಷ್ಠಾನದಿಂದ ಈ ಸಮಾರಂಭ ಆಯೋಜಿಸಲಾಗಿದ್ದು, ಈ ತ್ರಿವರ್ಣಧ್ವಜ ಅತ್ಯಂತ ಉದ್ದದ ತ್ರಿವರ್ಣಧ್ವಜ ಎಂಬುದಾಗಿ ಚಾಂಪಿಯನ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಗೆ ಸೇರಿದೆ ಎಂದು ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದೆ.

ರಾಜ್ಯದ 35 ಸಮಾಜಸೇವಾ ಸಂಘಟನೆಗಳಿಗೆ ಸೇರಿದ ಸಾವಿರಾರು ಕಾರ್ಯಕರ್ತರು ಮತ್ತು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಅಮಪಾರಾ ಚೌಕ್‌ನಿಂದ ಪಂಡಿತ್ ರವಿಶಂಕರ್ ಶುಕ್ಲಾ ವಿವಿ ವರೆಗೆ ಮಾನವ ಸರಪಣಿ ನಿರ್ಮಿಸಿ, 15 ಕಿಲೋಮೀಟರ್ ಉದ್ದದ ತಿರಂಗಾ ಹಿಡಿದರು. ಇದರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬದವರನ್ನು ಸನ್ಮಾನಿಸಿದರು.

ಮಾಜಿ ಮುಖ್ಯಮಂತ್ರಿಗಳಾಧ ರಮಣ್ ಸಿಂಗ್ ಮತ್ತು ಅಜಿತ್ ಜೋಗಿ, ರಾಜ್ಯ ಸಂಪುಟದ ಸಚಿವರು, ಶಾಸಕರು ಹಾಗೂ ಸಾರ್ವಜನಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News