ಜೈಲಿನಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಗೆ 30 ಸಾವಿರಕ್ಕೂ ಹೆಚ್ಚು ರಾಖಿ ರವಾನೆ

Update: 2019-08-13 17:26 GMT

ಗಾಂಧೀನಗರ, ಆ.13: ಗುಜರಾತ್‌ನ ಪಾಲನ್‌ಪುರ ಜೈಲಿನಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ರಿಗೆ 30 ಸಾವಿರಕ್ಕೂ ಹೆಚ್ಚು ರಾಖಿಗಳನ್ನು ರವಾನಿಸಲಾಗಿದೆ. ಆ.14ರಂದು ಸುಮಾರು 300 ಮಹಿಳೆಯರು ಜೈಲಿಗೆ ಭೇಟಿ ನೀಡಿ ಸಂಜೀವ್ ಭಟ್ಟ್‌ಗೆ ರಾಖಿ ಕಟ್ಟಲಿದ್ದಾರೆ ಎಂದು ವರದಿಯಾಗಿದೆ.

ಸಂಜೀವ್ ಭಟ್ ರನ್ನು ಬೆಂಬಲಿಸಿ ಅವರ ವಕೀಲೆ ದೀಪಿಕಾ ರಜಾವತ್ 15 ದಿನದ ಹಿಂದೆ ‘ಸಂಜೀವ್ ಭಟ್ ಗೆ ಒಂದು ರಾಖಿ’ ಎಂಬ ಅಭಿಯಾನವನ್ನು ಸಾಮಾಜಿಕ ಮಾಧ್ಯಮದಲ್ಲಿ ಆರಂಭಿಸಿದ್ದರು. ಅಹಮದಾಬಾದ್‌ನ ಡ್ರೈವ್‌ರೋಡ್‌ನಲ್ಲಿರುವ ಭಟ್ ನಿವಾಸದಲ್ಲಿ ಈ ರಾಖಿಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್, ಮಾನವ ಹಕ್ಕು ಕಾರ್ಯಕರ್ತ ಫಾದರ್ ಸೆಡ್ರಿಕ್ ಪ್ರಕಾಶ್, ಪಟಿದಾರ್ ಮುಖಂಡೆ ಗೀತಾ ಪಟೇಲ್, ಕಾರ್ಯಕರ್ತರಾದ ದೇವ್ ದೇಸಾಯಿ ಮತ್ತು ನೂರ್‌ಜಹಾನ್ ದಿವಾನ್ ಭಟ್ಟ್ ಅವರ ಬೆಂಬಲಕ್ಕೆ ನಿಂತಿದ್ದಾರೆ.

 1989-90ರಲ್ಲಿ ನಡೆದಿದ್ದ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿ ಆಗ ಪೊಲೀಸ್ ಅಧಿಕಾರಿಯಾಗಿದ್ದ ಸಂಜೀವ್ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News