ಸಿಬಿಎಸ್‌ಸಿ ಪರೀಕ್ಷಾ ಶುಲ್ಕ ಹೆಚ್ಚಳ ಜಾತಿವಾದಿ, ಬಡವರ ವಿರೋಧಿ: ಮಾಯಾವತಿ

Update: 2019-08-13 17:36 GMT

ಹೊಸದಿಲ್ಲಿ, ಆ. 13: ಸಿಬಿಎಸ್‌ಇ ಪರೀಕ್ಷಾ ಶುಲ್ಕ ಏರಿಕೆ ಮಾಡಿರುವುದನ್ನು ‘ಬಡವರ ವಿರೋಧಿ’ ಎಂದು ಕರೆದಿರುವ ಬಿಎಸ್ಪಿ ವರಿಷ್ಠೆ ಮಾಯಾವತಿ, ಈ ನಿರ್ಧಾರವನ್ನು ಕೂಡಲೇ ಹಿಂದೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸಿಬಿಎಸ್‌ಇ ಇತ್ತೀಚೆಗೆ 10ನೇ ತರಗತಿ ಹಾಗೂ 12ನೇ ತರಗತಿಯ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ರೂಪಾಯಿ 750ರಿಂದ ರೂಪಾಯಿ 1,500ಕ್ಕೆ ಏರಿಕೆ ಮಾಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪರೀಕ್ಷಾ ಶುಲ್ಕವನ್ನು 24 ಪಟ್ಟು ಹೆಚ್ಚಿಸಿದೆ.

ಅಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು 50 ರೂಪಾಯಿ ಬದಲು 1200 ಶುಲ್ಕ ಪಾವತಿಸಬೇಕು ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ ಇದು ದುರಾದೃಷ್ಟಕರ, ಜಾತಿವಾದಿ ಹಾಗೂ ಬಡವರ ವಿರೋಧಿ ನಿರ್ಧಾರ. ಸಿಬಿಎಸ್‌ಇ ಈ ನಿರ್ಧಾರವನ್ನು ಕೂಡಲೇ ಹಿಂದೆ ತೆಗೆದುಕೊಳ್ಳಬೇಕು. ಇದು ಬಿಎಸ್ಪಿಯ ಆಗ್ರಹ ಎಂದು ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News