‘ಬಾಯಿ ಮುಚ್ಚಿ’ ಎಂದು ನೆರೆ ಸಂತ್ರಸ್ತರನ್ನು ಗದರಿಸಿದ ಮಹಾರಾಷ್ಟ್ರ ಸಚಿವ

Update: 2019-08-13 18:24 GMT

ಮುಂಬೈ, ಅ. 13: ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದ ಕೊಲ್ಹಾಪುರ ಜಿಲ್ಲೆಯ ಶಿರೋಲ್ ತಾಲೂಕಿನ ನೆರೆ ಸಂತ್ರಸ್ತ ಜನರನ್ನು ಸೋಮವಾರ ತರಾಟೆಗೆ ತೆಗೆದುಕೊಳ್ಳುವ ಮೂಲಕ ಮಹಾರಾಷ್ಟ್ರದ ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ವಿವಾದಕ್ಕೆ ಒಳಗಾಗಿದ್ದಾರೆ.

ಶಿರೋಲ್‌ನಲ್ಲಿ ನೆರೆ ಸಂತ್ರಸ್ತ ಗುಂಪೊಂದನ್ನು ಉದ್ದೇಶಿಸಿ ಪಾಟೀಲ್ ಮಾತನಾಡಿದ್ದರು. ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳು ತೀವ್ರವಾಗಿ ನರೆ ಪೀಡಿತವಾಗಿತ್ತು. ಪಾಟೀಲ್ ಅವರು ಮಾತನಾಡುತ್ತಿರುವಾಗ, ಕೆಲವರು ತಮ್ಮ ಸಂಕಷ್ಟಗಳ ಬಗ್ಗೆ ಅವರ ಗಮನ ಸೆಳೆದರು ಹಾಗೂ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದರು. ಪಾಟೀಲ್ ಅವರು ನೆರವು ನೀಡುವ ಭರವಸೆ ನೀಡಿದರು. ಆದರೆ, ಒಂದು ಬಾರಿ ತಾಳ್ಮೆ ಕಳೆದುಕೊಂಡು ‘ಬಾಯಿ ಮುಚ್ಚಿ’ ಎಂದು ಮರಾಠಿಯಲ್ಲಿ ಗದರಿಸಿದರು. ಈ ಬಗ್ಗೆ ಪಾಟೀಲ್ ಅವರನ್ನು ಎನ್‌ಸಿಪಿಯ ಮುಖ್ಯ ವಕ್ತಾರ ನವಾಬ್ ಮಲ್ಲಿಕ್ ಟೀಕಿಸಿದ್ದಾರೆ. ‘‘ಜನರ ಸಂಕಷ್ಟಗಳನ್ನು ಆಲಿಸುವ ಹಾಗೂ ಅವರಿಗೆ ಭರವಸೆ ನೀಡುವ ಬದಲು ಪಾಟೀಲ್ ಅವರ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ಬಾಯಿ ಮುಚ್ಚುವಂತೆ ಗದರಿಸಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News