ದಿಲ್ಲಿ ವಿಮಾನ ನಿಲ್ದಾಣದಲ್ಲಿ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಪೊಲೀಸ್ ವಶಕ್ಕೆ

Update: 2019-08-14 09:59 GMT

ಹೊಸದಿಲ್ಲಿ : ಕಾಶ್ಮೀರದ ಪ್ರಥಮ ಐಎಎಸ್ ಟಾಪರ್, ಈಗ ರಾಜಕಾರಣಿಯಾಗಿರುವ ಮಾಜಿ ಐಎಎಸ್ ಅಧಿಕಾರಿ ಶಾ ಫೈಸಲ್ ಅವರನ್ನು ಇಂದು ಅಪರಾಹ್ನ 12.30ರ ಸುಮಾರಿಗೆ ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಪೊಲೀಸರು ಅವರನ್ನು ವಾಪಸ್ ಶ್ರೀನಗರಕ್ಕೆ ಕಳುಹಿಸಿದ್ದಾರೆ. ಅವರನ್ನೀಗ ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯ ಅನ್ವಯ ವಶಪಡಿಸಿಕೊಂಡು ಗೃಹಬಂಧನದಲ್ಲಿರಿಸಲಾಗಿದೆ. ಈ ಕಾಯಿದೆಯನ್ವಯ ಯಾವುದೇ ವ್ಯಕ್ತಿಯನ್ನು ಯಾವುದೇ ವಿಚಾರಣೆಯಿಲ್ಲದೆ ಸರಕಾರ ಮೂರರಿಂದ ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸಬಹುದಾಗಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮದ ಕಟು ಟೀಕಾಕಾರರಾಗಿರುವ ಶಾ ಫೈಸಲ್, ಸರಕಾರದ ಕ್ರಮ "ರಾಜ್ಯದಲ್ಲಿ ರಾಜಕೀಯ ಮುಖ್ಯವಾಹಿನಿಯ ಅಂತ್ಯ,'' ಎಂದು ಬಣ್ಣಿಸಿದ್ದರು.

2009ರಲ್ಲಿ ಐಎಎಸ್ ಟಾಪರ್ ಆದ ಪ್ರಥಮ ಕಾಶ್ಮೀರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಾ ಫೈಸಲ್ ಈ ವರ್ಷ  ತಮ್ಮ ಆಡಳಿತಾತ್ಮಕ ಹುದ್ದೆಗೆ ರಾಜೀನಾಮೆ ನೀಡಿ ಮುಖ್ಯವಾಹಿನಿ ರಾಜಕಾರಣಕ್ಕೆ ತಮ್ಮ ಜೆ&ಕೆ ಪೀಪಲ್ಸ್ ಮೂವ್‍ಮೆಂಟ್ ಮೂಲಕ ಕಾಲಿಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News