ದಿಲ್ಲಿ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪರೀಕ್ಷಾ ಶುಲ್ಕ ವಿನಾಯಿತಿ: ಮನೀಶ್ ಸಿಸೋಡಿಯ

Update: 2019-08-14 14:37 GMT

ಹೊಸದಿಲ್ಲಿ, ಆ.14: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ 10 ಮತ್ತು 12ನೇ ತರಗತಿ ಪರೀಕ್ಷೆ ಬರೆಯಲಿರುವ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿರುವ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಿಲ್ಲ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಬುಧವಾರ ತಿಳಿಸಿದ್ದಾರೆ. ಎಲ್ಲ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳ ಸಂಪೂರ್ಣ ಶುಲ್ಕವನ್ನು ದಿಲ್ಲಿ ಸರಕಾರವೇ ಭರಿಸಲಿದೆ. ಈ ಬಗ್ಗೆ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಪರೀಕ್ಷ ಶುಲ್ಕದಲ್ಲಿ ಮಾಡಿರುವ ಏರಿಕೆಯನ್ನು ಇಳಿಸುವಂತೆ ಸಿಬಿಎಸ್‌ಇಗೆ ಸರಕಾರ ಮನವಿ ಮಾಡಿದೆ. ಏನೇ ಆಗಲಿ, ಯಾವುದೇ ಮಗುವೂ ಶುಲ್ಕ ಪಾವತಿಯ ಹೊರೆಯನ್ನು ಹೊರುವಂತಾಗಬಾರದು. ಆ ಮೊತ್ತವನ್ನು ಸರಕಾರವೇ ಭರಿಸುತ್ತದೆ ಎಂದು ಸಿಸೋಡಿಯ ತಿಳಿಸಿದ್ದಾರೆ.

ಕಳೆದ ವಾರ ಮಂಡಳಿ ಹೊರಡಿಸಿದ ಅಧಿಸೂಚನೆಯಲ್ಲಿ ದಿಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳು ಐದು ವಿಷಯಗಳಿಗೆ 1200ರೂ. ಶುಲ್ಕ ಪಾವತಿಸಬೇಕು ಮತ್ತು ಭಾರತದ ಇತರೆಡೆಗಳ ವಿದ್ಯಾರ್ಥಿಗಳು 1,500ರೂ. ಪಾವತಿಸಬೇಕು ಎಂದು ತಿಳಿಸಿತ್ತು. ಈ ಹಿಂದೆ ದಿಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ 350ರೂ. ಪಡೆಯಲಾಗುತ್ತಿತ್ತು. ಇದರಲ್ಲಿ 300ರೂ.ವನ್ನು ದಿಲ್ಲಿ ಸರಕಾರವೇ ಭರಿಸುತ್ತಿತ್ತು. ಇನ್ನು ಸಾಮಾನ್ಯ ವಿಭಾಗದ ವಿದ್ಯಾರ್ಥಿಗಳಿಗೆ ಈ ಹಿಂದೆ 750ರೂ.

ಪರೀಕ್ಷಾ ಶುಲ್ಕ ನಿಗದಿಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News