ಮೌಂಟ್ ಕಿಲಿಮಾಂಜಾರೊ ಏರಿದ 9 ವರ್ಷದ ಬಾಲಕ

Update: 2019-08-14 17:02 GMT

ಹೊಸದಿಲ್ಲಿ, ಆ. 14: ಪುಣೆ ನಿವಾಸಿ 9 ವರ್ಷದ ಬಾಲಕ ಅದ್ವೈತ್ ಭಾರತೀಯ ಇತ್ತೀಚೆಗೆ ತಾಂಝಾನಿಯದ ಮೌಂಟ್ ಕಿಲಿಮಾಂಜಾರೊ ಪರ್ವತವನ್ನು ಏರುವ ಮೂಲಕ ಜಗತ್ತನ್ನು ಬೆರಗುಗೊಳಿಸಿದ್ದಾರೆ.

5,895 ಮೀಟರ್ (19,341 ಅಡಿ) ಎತ್ತರದ ಕಿಲಿಮಾಂಝಾರೊ ಆಫ್ರಿಕದ ಅತ್ಯಂತ ಎತ್ತರದ ಪರ್ವತವಾಗಿದೆ.

ಪರ್ವತಾರೋಹಣದ ಮಾರ್ಗದರ್ಶಿ ಸಮೀರ್ ಪಥಮ್‌ರ ಮಾರ್ಗದರ್ಶನದಲ್ಲಿ ಅದ್ವೈತ್ ಜುಲೈ 31ರಂದು ಪರ್ವತದ ತುದಿಯನ್ನು ತಲುಪಿದರು. ಅವರು ಆರು ದಿನಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.

2016ರಲ್ಲಿ ಆರು ವರ್ಷದ ಬಾಲಕನಾಗಿದ್ದಾಗ, ಅದ್ವೈತ್ ಜಗತ್ತಿನ ಅತಿ ಎತ್ತರದ ಶಿಖರ ವೌಂಟ್ ಎವರೆಸ್ಟ್‌ನ ಮೂಲ ಶಿಬಿರದವರೆಗೆ ಯಶಸ್ವಿಯಾಗಿ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News