ಚೀನಿಯರ ಆದಾಯ 70 ವರ್ಷಗಳಲ್ಲಿ 60 ಪಟ್ಟು ಏರಿಕೆ

Update: 2019-08-14 17:14 GMT

ಬೀಜಿಂಗ್, ಆ. 14: ಚೀನಾದ ಪ್ರಜೆಗಳ ತಲಾವಾರು ಆದಾಯ 70 ವರ್ಷಗಳಲ್ಲಿ ಸುಮಾರು 60 ಪಟ್ಟು ಹೆಚ್ಚಿದೆ ಎಂದು ಆ ದೇಶದ ಹೊಸ ಅಧಿಕೃತ ಅಂಕಿಅಂಶ ತಿಳಿಸಿದೆ.

ಚೀನಾವು ಮಧ್ಯಮ ಆದಾಯದಿಂದ ಅಧಿಕ ಆದಾಯ ದೇಶವಾಗುವುದಕ್ಕೆ ನಿಕಟವಾಗಿರುವ ಸಂದರ್ಭದಲ್ಲಿ ಚೀನಾದ ನ್ಯಾಶನಲ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ (ಎನ್‌ಬಿಎಸ್)ನ ವರದಿಯೊಂದರಲ್ಲಿ ಈ ಅಂಕಿಅಂಶವನ್ನು ನೀಡಲಾಗಿದೆ.

ಚೀನಾದ ತಲಾವಾರು ಆದಾಯ 1949ರಲ್ಲಿ ಸುಮಾರು 49.7 ಯುವಾನ್ (ಸುಮಾರು 505 ರೂಪಾಯಿ) ಆಗಿತ್ತು. 1949ರಲ್ಲಿ ಆಂತರಿಕ ಯುದ್ಧದಲ್ಲಿ ವಿಜಯಿಯಾದ ಬಳಿಕ, ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಹೊಸ ಚೀನಾವನ್ನು ಸ್ಥಾಪಿಸಿತ್ತು.

2018ರಲ್ಲಿ ತಲವಾರು ಆದಾಯವು 28,200 ಯುವಾನ್ (ಸುಮಾರು 2.86 ಲಕ್ಷ ರೂಪಾಯಿ) ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News