ಕಂಬಳಪದವು: ಎಕೆ ಬೋರ್ಡ್ಸ್ ಆ್ಯಂಡ್ ಡೋರ್ಸ್ ವತಿಯಿಂದ ಸ್ವಾತಂತ್ರ್ಯದಿನಾಚರಣೆ

Update: 2019-08-15 11:13 GMT

ಮಂಗಳೂರು: ಎಕೆ ಬೋರ್ಡ್ಸ್ ಆ್ಯಂಡ್ ಡೋರ್ಸ್ ಕಂಬಳಪದವು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಧ್ವಜಾರೋಹಣ ಕಾರ್ಯಕ್ರಮವನ್ನು ಸಂಸ್ಥೆಯ ಪಾಲುದಾರ ಎಕೆ ನೌಶಾದ್ ನೆರವೇರಿಸಿದರು.

ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕೆಎಂ ಅಬ್ದುಲ್ ರಹ್ಮಾನ್ ಕೋಡಿಜಾಲ್ ಸ್ವಾಗತಿಸಿ, ಸ್ವಾತಂತ್ರ್ಯದ ಶುಭ ಕೋರಿದರು.

ಈ ಸಂದರ್ಭ ಸುಲೈಮಾನ್, ಸಿದ್ದೀಕ್ ಬೃಂದಾವನ, ಲಿಟ್ಟು ಮಲ್ಲಿಕ್, ಬ್ರಹ್ಮಾನಂದ್ ಅರ್ಜುನ್, ಸುಭಾಷ್, ದೀಪಕ್, ಸಂಗ್ರಾಮ್ ಇನ್ನಿತರರು ಭಾಗವಹಿಸಿದ್ದರು.

ನೌಷಾದ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News