ಬೀಡಿ ಕಾರ್ಮಿಕರಿಗೆ ಸಾವಿರ ಬೀಡಿಗೆ 29.66 ರೂ. ಬೋನಸ್

Update: 2019-08-15 14:54 GMT

ಪುತ್ತೂರು: 2018-19 ನೇ ಸಾಲಿನಲ್ಲಿ ಬೀಡಿ ಕಾರ್ಮಿಕರಿಗೆ ರಜಾ ಸಂಬಳ, ಹಬ್ಬದ ರಜಾ ಸಂಬಳ,  ಸೇರಿ ಬೋನಸ್ ಪ್ರತಿ ಸಾವಿರ ಬೀಡಿಗೆ 29.66 ರೂ. (1 ಲಕ್ಷ ಬೀಡಿಗೆ ರೂ. 2,966.00) ಮಾಲಕರು ಬಿಡುಗಡೆಗೊಳಿಸಿದ್ದು, ಬೋನಸ್‍ನಲ್ಲಿ ಮೋಸ ನಡೆದರೆ ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಗಮನಕ್ಕೆ ತಂದಲ್ಲಿ ಕಾರ್ಮಿಕರಿಗೆ ನ್ಯಾಯ ಒದಗಿಸಲಾಗುವುದು ಎಂದು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಅದ್ಯಕ್ಷ ಗುಡ್ಡಪ್ಪ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹಾಗೂ ಉಪಾದ್ಯಕ್ಷರಾದ ಕೇಶವ ಗೌಡ, ಅವರು ತಿಳಿಸಿದ್ದಾರೆ.

ಬೀಡಿ ಕಾರ್ಮಿಕರಿಗೆ ತಮ್ಮ ಬೋನಸ್ ಸರಿಯಾಗಿ ಸಿಗುವಂತೆ ಮಾಡಲು ಎಲ್ಲಾ ಕಾರ್ಮಿಕ ಸಂಘಗಳು ಬದ್ಧತೆಯಿಂದ ಕೆಲಸ ಮಾಡಬೇಕಿದೆ. ಬೋನಸ್ ನಲ್ಲಿ ಮೋಸ ನಡೆದರೆ ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ ಗಮನಕ್ಕೆ ತಂದರೆ ಕಾರ್ಮಿಕರಿಗೆ ಸರಿಯಾದ ಬೋನಸ್ ತೆಗೆಸಿಕೊಡಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

ಬೀಡಿ ಕೆಲಸ ಬಿಡುವ ಕಾರ್ಮಿಕರು ತಮ್ಮ ಕೆಲಸ ಬಿಟ್ಟ ಕೂಡಲೇ ಸಂಘದ ಗಮನಕ್ಕೆ ತಿಳಿಸಿದರೆ ಪಂಡ್ ಜೊತೆ ಗ್ರಾಚ್ಯುವಿಟಿಯನ್ನೂ ತೆಗೆಸಿಕೊಡಲಾಗುವುದು ಎಂದು ಅವರು ತಿಳಿಸಿದ್ದು, ಮಾಹಿತಿಗಾಗಿ ಬೀಡಿ ಕಾರ್ಮಿಕರು 9448155980, 9164998712, 9743599559 ಈ ನಂಬ್ರಗಳಿಗೆ ಸಂಪರ್ಕಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News