ದೇಶವು ಸರ್ವ ಜನಾಂಗದ ಶಾಂತಿಯ ತೋಟವಾಗಲಿ: ರಶೀದ್ ಹಾಜಿ

Update: 2019-08-15 15:08 GMT

ಕೊಣಾಜೆ: ನಮಗೆ ಎಷ್ಟು ಸ್ವಾತಂತ್ರ್ಯಲಭಿಸಿದರೂ ವಿಧಿಯಾಟದ ಮುಂದೆ ನಾವೆಲ್ಲರೂ ಕುಬ್ಜರಾಗಿದ್ದೇವೆ. ಯುವ ಸಮುದಾಯವು ಸ್ವಾತಂತ್ರ್ಯ ಲಭಿಸಿದುದರ ಹಿಂದಿನ ಸುಖ, ದು:ಖಗಳನ್ನ ಅರಿತು ಎಲ್ಲರೂ ಶಾಂತಿ, ಸಹಬಾಳ್ವೆಯಲ್ಲಿ ಬಾಳುವ ಸರ್ವಜನಾಂಗದ ಶಾಂತಿಯ ತೋಟ ಭಾರತವಾಗಲಿ ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಆಶಿಸಿದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್ (ದ.ಕ -ಉಡುಪಿ ಜಿಲ್ಲೆ) ಉಳ್ಳಾಲ ವಲಯ ಇದರ ಆಶ್ರಯದಲ್ಲಿ ಉಳ್ಳಾಲ ಅಬ್ಬಕ್ಕ ವೃತ್ತದಲ್ಲಿ ನಡೆದ 73 ನೇ ಸ್ವಾತಂತ್ರ್ಯೋತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಧ್ವಜಾರೋಹಣಗೈದು ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬರಲು ಅನೇಕ ಹಿರಿಯ ದೇಶ ಪ್ರೇಮಿಗಳು ಪ್ರಾಣವನ್ನೇ ಬಲಿ ನೀಡಿದ್ದು,ಅದನ್ನು ಸದಾ ನೆನಪಿಸುವ ಜವಬ್ದಾರಿ ಪ್ರತಿಯೊಬ್ಬ ಭಾರತೀಯನಾಗಿದ್ದು ಅದರಲ್ಲೂ ಉಳ್ಳಾಲ ಭಾಗದ ಅಬ್ಬಕ್ಕಳು ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷರಾದ ದಿನಕರ್ ಉಳ್ಳಾಲ್,ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಭರತ್ ಕುಮಾರ್ ,ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್,ನಿರ್ಮಲಾ ಕಾನ್ವೆಂಟ್ ಸುಪೀರಿಯರ್ ಸಿ.ಎಮ್ಮಾ ಜೋಸೆಫ್, ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ,ಮುಖಂಡರಾದ ಹೈದರ್ ಪರ್ತಿಪ್ಪಾಡಿ, ಸೌತ್ ಕೆನರಾ ಪೊಟೋಗ್ರಾಫರ್ಸ್ ನ ಸ್ಥಾಪಕಾಧ್ಯಕ್ಷರಾದ ಅರುಣ್ ಕುಮಾರ್ ಉಳ್ಳಾಲ್,ಅಧ್ಯಕ್ಷರಾದ ಚಿದಾನಂದ ಎ, ಎಸ್.ಕೆ.ಪಿ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಸಂತೋಷ್ ಕುಮಾರ್ ಮಾರ್ಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News