‘ಜ್ಞಾನದೇಗುಲ’ ಪ್ರಶಸ್ತಿ ಪ್ರದಾನ -ಕೃತಿ ಬಿಡುಗಡೆ

Update: 2019-08-15 15:59 GMT

ಉಡುಪಿ, ಆ.15: ಒಂದು ಕಾಲದಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಅವ್ಯವಸ್ಥೆ ಇತ್ತು. ಸ್ವಾಮೀಜಿಗಳಿಗೆ ಸರಿಯಾದ ಶಿಕ್ಷಣವೇ ಇರಲಿಲ್ಲ. ಆದರೆ ತಪಸ್ವಿಯಾಗಿದ್ದ ಅವರಲ್ಲಿ ಅನುಷ್ಠಾನ ಇತ್ತು. ವಿದ್ಯೆಗಿಂತ ತಪಸ್ವಿ ಮುಖ್ಯವಾಗಿರು ತ್ತದೆ ಎಂದು ವಿದ್ವಾಂಸ ಡಾ.ಬನ್ನಂಜೆ ಗೋವಿಂದಾಚಾರ್ಯ ಹೇಳಿದ್ದಾರೆ.

ಉಡುಪಿ ಈಶಾವಾಸ್ಯ ಪ್ರತಿಷ್ಠಾನದ ವತಿಯಿಂದ ಗುರುವಾರ ಉಡುಪಿ ಪೇಜಾವರ ಮಠದ ಶ್ರೀರಾಮವಿಠಲ ಸಭಾಭವನದಲ್ಲಿ ಆಯೋಜಿಸಲಾದ ಸಂಸ್ಕೃತಿ- ಸಂಭ್ರಮ ‘ಹಿರಿಯ ನೆನಪು-2019’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಡಾ.ಬನ್ನಂಜೆ ಗೋವಿಂದಾಚಾರ್ಯರ ‘ಶ್ರೀಮಧ್ವ ವಿಜಯ’ ಮತ್ತು ‘ಬನ್ನಂಜೆ ಬರಹಗಳು- 4’ ಕೃತಿಗಳನ್ನು ಬಿಡುಗಡೆಗೊಳಿಸಿದರು. ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಪ್ರೋತ್ಸಾಹ ನೀಡುತ್ತಿರುವ ಎಚ್.ಲಕ್ಷ್ಮೀನಾರಾಯಣ ರಾವ್ ಕತಾರ್ ಹಾಗೂ ಮುಂಬೈಯ ಪ್ರಫುಲ್ಲಾ ಉರ್ವಾಲ್ ಅವರಿಗೆ ಜ್ಞಾನದೇಗುಲ ಪ್ರಶಸ್ತಿ ಪ್ರದಾನ ಮಾಡಲಾ ಯಿತು. ಪ್ರಫುಲ್ಲಾ ಅನುಪಸ್ಥಿತಿ ಯಲ್ಲಿ ಅವರ ಮಗ ವಿಕ್ರಾಂತ್ ಎಸ್. ಉರ್ವಾಲ್ ಪ್ರಶಸ್ತಿ ಸ್ವೀಕರಿಸಿದರು.

ಬಳಿಕ ಸಾಂಸ್ಕೃತಿಕ ಸಂಭ್ರಮದಲ್ಲಿ ಸೃಷ್ಠಿ ನೃತ್ಯ ಕಲಾ ಕುಟೀರ ಪ್ರಸ್ತುತ ಪಡಿಸುವ ಗೀತ ಗೋವಿಂದ ನೃತ್ಯ ಮಂಜರಿ ಕಾರ್ಯ ಕ್ರಮ ನಡೆಯಿತು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News