×
Ad

ಹಿರಿಯ ನಟಿ ವಿದ್ಯಾ ಸಿನ್ಹಾ ನಿಧನ

Update: 2019-08-15 22:01 IST

ಹೊಸದಿಲ್ಲಿ, ಆ. 15: ಬಾಲಿವುಡ್‌ನ ಹಿರಿಯ ನಟಿ ವಿದ್ಯಾ ಸಿನ್ಹಾ ಮುಂಬೈಯ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಗುರುವಾರ ಅಪರಾಹ್ನ 1 ಗಂಟೆಗೆ ನಿಧನರಾದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಬಸು ಚಟರ್ಜಿ ಅವರು 1974ರ ‘ರಜನಿಗಂಧ’ ಚಿತ್ರದಿಂದ ವಿದ್ಯಾ ಸಿನ್ಹಾ ಜನಪ್ರಿಯರಾಗಿದ್ದರು. ಈ ಚಿತ್ರದಲ್ಲಿ ಅವರು ಅಮೋಲ್ ಪಾಲೇಕರ್ ಜೊತೆ ನಟಿಸಿದ್ದರು. ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಅವರನ್ನು ರವಿವಾರ ಮುಂಬೈಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರಿಗೆ ಜೀವ ರಕ್ಷಕ ವ್ಯವಸ್ಥೆ ಅಳವಡಿಸಲಾಗಿತ್ತು. ಆದರೆ, ಅವರು ಗುಣಮುಖರಾಗಲಿಲ್ಲ. ವಿದ್ಯಾ ಸಿನ್ಹಾ ಅವರು ತನ್ನ 18ನೇ ವಯಸ್ಸಿನಲ್ಲಿ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದರು. ‘ಚೋಚಿ ಸಿ ಬಾತ್’, ‘ಪತಿ ಪತ್ನಿ ವೋ’ ಮೊದಲಾದ ಚಿತ್ರಗಳ ಮೂಲಕ ಅವರು ಸಿನೆಮಾ ಪ್ರಿಯರ ಮನ ಗೆದ್ದಿದ್ದರು ಎಂದು ಕುಟುಂಬ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News