ಮಂಗಳೂರು: ಯುನಿವೆಫ್ ನಿಂದ ಸ್ವಾತಂತ್ರ್ಯೋತ್ಸವ

Update: 2019-08-15 16:56 GMT

ಮಂಗಳೂರು: ಯುನಿವೆಫ್ ಕರ್ನಾಟಕ ದ.ಕ. ಘಟಕದ ವತಿಯಿಂದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವು ಫಳ್ನೀರ್ ನ ದಾರುಲ್ ಇಲ್ಮ್ ನಲ್ಲಿ ವಿಜ್ರಂಭಣೆಯಿಂದ ಜರಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಸ್ಲಿಮ್ ಡೆವಲಪ್ ಮೆಂಟ್ ಕಮಿಟಿ ಅಧ್ಯಕ್ಷ ಡಾ. ಅಮೀರ್ ತುಂಬೆ ಮಾತನಾಡಿ "ದೇಶಕ್ಕೆ ಸ್ವಾತಂತ್ರ್ಯ  ತಂದು ಕೊಡುವಲ್ಲಿ ಮುಸ್ಲಿಮರು ಮಾಡಿದ ತ್ಯಾಗ ಬಲಿದಾನಗಳನ್ನು ಮರೆಮಾಚಿ ಇತಿಹಾಸವನ್ನು ತಿರುಚಲಾಗು ತ್ತಿದೆ. ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಕೂಡಾ ಸಂಘಟಿತ ಹೋರಾಟದ ಅಗತ್ಯ ಇದೆ." ಎಂದು ಕರೆ ನೀಡಿದರು.

ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷೀಯ ಭಾಷಣ ಮಾಡಿ "ಇಂದು ವ್ಯವಸ್ಥಿತ ರೂಪದಲ್ಲಿ ನಮ್ಮ ಸ್ವಾತಂತ್ರ್ಯ ಹರಣ ನಡೆಯುತ್ತಿದ್ದು ಮುಸ್ಲಿಮ್ ಸಮುದಾಯ ವೈಚಾರಿಕ ಗುಲಾಮಗಿರಿಗೆ ಒಳಗಾಗಿದೆ. ವೈಚಾರಿಕ ಏಕತೆಯೊಂದಿಗೆ ಕೋಮುವಾದಿ ಶಕ್ತಿಗಳ ವಿರುದ್ಧ ಸೆಟೆದು ನಿಂತು ಸ್ವಾತಂತ್ರ್ಯದ ನೈಜ ಆಶಯಗಳನ್ನು ಉಳಿಸಿಕೊಳ್ಳುವುದು ಕಾಲದ ಅಗತ್ಯ" ಎಂದು ಹೇಳಿದರು.

ಅತೀಕುರ್‍ರಹ್ಮಾನ್ ಕಿರ್ ಅತ್ ಪಠಿಸಿದರು. ಜಿಲ್ಲಾಧ್ಯಕ್ಷ ಅಬ್ದುಲ್ಲಾ ಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಡ್ವೊಕೇಟ್ ಸಿರಾಜುದ್ದೀನ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶಹಿಯಾ ಅಹ್ಮದ್ ವಂದನಾರ್ಪಣೆ ಗೈದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News