ನಿರ್ಭೀತಿಯಿಂದ ಬದುಕಲು ಒಗ್ಗಟ್ಟಾಗಿರಿ: ಕೆ.ಎಮ್. ಶರೀಫ್

Update: 2019-08-15 17:39 GMT

ಬಂಟ್ವಾಳ, ಆ.15: ದೇಶದಲ್ಲಿ ದಿನದಿಂದ ದಿನಕ್ಕೆ ಜನಸಾಮಾನ್ಯರಿಂದ ಸ್ವಾತಂತ್ರ್ಯದ ಹಕ್ಕನ್ನು ಕಸಿಯಲಾಗುತ್ತಿದ್ದು ಜನರು ನಿರ್ಭೀತಿ, ಘನತೆಯಿಂದ ಬದುಕಲು ಒಗ್ಗಟ್ಟಾಗುವ ಅನಿವಾರ್ಯತೆ ಇದೆ ಎಂದು ಪಾಪ್ಯುಲರ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿಯ ಸದಸ್ಯ ಕೆ.ಎಂ.ಶರೀಫ್ ಕರೆ ನೀಡಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಆಯೋಜಿಸಿದ 'ನಿರ್ಭೀತಿಯಿಂದ, ಘನತೆಯಿಂದ ಜೀವಿಸಿ' ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ 'ಭಯಮುಕ್ತ ಸ್ವಾತಂತ್ರ್ಯ' ಎಂಬ ಘೋಷಣೆಯಲ್ಲಿ ಬಿ.ಸಿ.ರೋಡಿನ ಮಿತ್ತಬೈಲ್ ಸಭಾಂಗಣ ದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. 

ಬಿಜೆಪಿ ಸರಕಾರ ಮೊದಲ ಐದು ವರ್ಷದ ಆಡಳಿದಲ್ಲಿ ಎಲ್ಲಾ ವೈಫಲ್ಯಗಳ ಮದ್ಯೆಯೂ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವು ದಕ್ಕೆ ಈ ದೇಶದ ಜಾತ್ಯತೀತ ಹಾಗೂ ಪ್ರಾದೇಶಿಕ ಪಕ್ಷಗಳ ಸ್ವಪ್ರತಿಷ್ಠೆ ಕಾರಣವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಸ್ವಾತಂತ್ರ್ಯದ ಮೌಲ್ಯ ಕುಸಿಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶದಲ್ಲಿ ನಡೆಯುತ್ತಿರುವ ಹತ್ಯಾಕಾಂಡ, ದೌರ್ಜನ್ಯ, ಗುಂಪು ಹತ್ಯೆಗಳನ್ನು ವ್ಯವಸ್ಥಿತವಾಗಿ ನಡೆಸುವ ಆರೆಸ್ಸೆಸ್ ಬಳಿಕ ಅದನ್ನು ನಿರಾಕರಿಸುತ್ತದೆ. ರಾಷ್ಟ್ರ ಪಿತ ಮಹತ್ಮ‌ ಗಾಂಧಿಯನ್ನು ಕೊಂದ ಗೋಡ್ಸೆ ಆರೆಸ್ಸೆಸ್ ಅಲ್ಲ ಎಂದು ವಾದಿಸುತ್ತಿದ್ದ ಆರೆಸ್ಸೆಸ್  ಇಂದು ಮಹಾತ್ಮ ಎಂದು ಬಿಂಬಿಸಲಾಗುತ್ತಿದೆ. ಅಲ್ಲದೆ ಬಾಂಬ್ ಸ್ಫೋಟದ ಆರೋಪ ಪ್ರಜ್ಞಾಸಿಂಗ್ ಗೆ ಬಿಜೆಪಿ ಟಿಕೆಟ್ ನೀಡಿ ಸಂಸದರ ನ್ನಾಗಿ ಮಾಡಿದೆ. ಈ ಮೂಲಕ ಆರೆಸ್ಸೆಸ್ ದೇಶದಲ್ಲಿ ಮತ್ತಷ್ಟು ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದರು. 

ಇಂದು ದೇಶದಲ್ಲಿ ಜನಸಾಮಾನ್ಯರು ಅಭದ್ರತೆಯಿಂದ ಜೀವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ 'ನಿರ್ಭೀತಿಯಿಂದ ಹಾಗೂ ಘನತೆಯಿಂದ ಜೀವಿಸಿ' ಎಂಬ ಘೋಷಣೆಯಲ್ಲಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಅಧ್ಯಕ್ಷ ಇಜಾಝ್ ಅಹ್ಮದ್ ಅಧ್ಯಕ್ಷತೆ ವಹಿಸಿದರು. ಎಸ್ ಡಿ ಪಿ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಕೋಶಾಧಿಕಾರಿ ರಫೀಕ್  ದಾರಿಮಿ, ನ್ಯಾಯವಾದಿ ಕಬೀರ್ ಮಾತನಾಡಿದರು.

ವಾರ್ತಾ ಭಾರತಿ ಉಪ ಸಂಪಾದಕ ಇಮ್ತಿಯಾಝ್ ಶಾ ತುಂಬೆ, ಎಸ್.ಡಿ.ಪಿ.ಐ. ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಯೂಸುಫ್ ಆಲಡ್ಕ, ಉಪಸ್ಥಿತರಿದ್ದರು.‌ ಪಿಎಫ್ಐ ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಸೆಲೀಂ ಕುಂಪನಮಜಲ್ ಸ್ವಾಗತಿಸಿದರು. ಶರೀಫ್ ಅಮೆಮಾರ್ ಕಾರ್ಯಕ್ರಮ ನಿರೂಪಿಸಿ ದನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News