ಎಸ್ಡಿಎಸಿಯು ಬಂಟ್ವಾಳ ತಾಲೂಕು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2019-08-15 17:42 GMT

ಬಂಟ್ವಾಳ :  ಎಸ್ಡಿಎಸಿಯು(ಆಟೋ ಯೂನಿಯನ್) ಬಂಟ್ವಾಳ ತಾಲೂಕು ವತಿಯಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು.

ಬಂಟ್ವಾಳ ತಾಲೂಕು ಅಧ್ಯಕ್ಷ ಸಂಶುದ್ದೀನ್ ಪಲ್ಲಮಜಲ್ ದ್ವಜಾರೋಹಣಗೈದರು. ಎಸ್ಡಿಪಿಐ  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್ಎಚ್ ಸ್ವಾತಂತ್ರ್ಯದ ಸಂದೇಶ ನೀಡಿದರು.

ಎಸ್ಡಿಎಸಿಯು ಜಿಲ್ಲಾಧ್ಯಕ್ಷ ಕಾದರ್ ಫರಂಗಿಪೇಟೆ ಪ್ರಾಸ್ತಾವಿಕ ಮಾತನಾಡಿದರು. ಎಸ್ಡಿಟಿಯು ಬಂಟ್ವಾಳ ತಾಲೂಕು ಸಂಚಾಲಕ ಮಾಲಿಕ್ ಕೊಳಕೆ,  ಉಪಾಧ್ಯಕ್ಷ ಯಾಕೂಬ್ ಮದ್ದ, ಮುಶ್ತಕ್, ಇಬ್ರಾಹಿಮ್, ಸತ್ತಾರ್ ಗೂಡಿನಬಳಿ, ಇಸ್ಮಾಯಿಲ್, ಅಝೀಝ್, ವಸಂತ, ರವಿ, ಸತೀಶ  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯೂನಿಯನ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ಇಲ್ಯಾಸ್ ವಗ್ಗ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News