ಅಂತಾರಾಷ್ಟ್ರೀಯ ದರ್ಜೆಯ ಹತ್ತು ಅಂಗನವಾಡಿ ಕಟ್ಟಡಗಳ ನಿರ್ಮಾಣ: ಶಾಸಕ ಡಾ.ಭರತ್ ಶೆಟ್ಟಿ

Update: 2019-08-16 06:00 GMT

ಕಾವೂರು, ಆ.16: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿ ಸಹಿತ ಒಟ್ಟು ಹತ್ತು ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಹಸಿರು ಕಟ್ಟಡ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಇಲ್ಲವೇ ಹೊಸದಾಗಿ ಕಟ್ಟಡ ನಿರ್ಮಿಸುವ ಯೋಜನೆ ಇದೆ ಎಂದು ಶಾಸಕ  ಡಾ.ಭರತ್ ಶೆಟ್ಟಿ ಹೇಳಿದ್ದಾರೆ.

ಕಾವೂರು ಕುಂಜತ್ತಬೈಲಿನಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಂಗನವಾಡಿಗಳು ಇದೀಗ ಸೌಲಭ್ಯದ ಕೇಂದ್ರಗಳಾಗಿ ಮಾರ್ಪಟ್ಟಿವೆ. ಸರಕಾರಿ ಸೌಲಭ್ಯಗಳು ಇಲ್ಲಿಂದಲೇ ಸಿಗುತ್ತವೆ. ಹೀಗಾಗಿ ಮಾದರಿ ಅಂಗನವಾಡಿಗಳ ನಿರ್ಮಾಣ ಅಗತ್ಯ ಎಂದರು.

ಅಂಗನವಾಡಿ ಕಾರ್ಯರ್ತರಿಗೆ ತರಬೇತಿ: ಮಕ್ಕಳಲ್ಲಿ ಎಳವೆಯಲ್ಲೇ ಪರಿಸರ ಸ್ನೇಹಿ ವ್ಯಕ್ತಿತ್ವ ರೂಪಿಸುವ ಮಹತ್ವಾಕಾಂಕ್ಷಿ ಯೋಚನೆ ನನ್ನದಾಗಿದ್ದು, ಸ್ವಚ್ಛತೆ, ಹಸಿರು ಬೆಳಸುವಿಕೆ ಮತ್ತಿತರ ವಿಶೇಷ ಶಿಕ್ಷಣ ಮಕ್ಕಳಿಗೆ ಎಳವೆಯಲ್ಲಿಯೇ ಮೂಡಿಸಬೇಕಿದೆ. ಇದಕ್ಕಾಗಿ ಅಂಗನವಾಡಿ ಶಿಕ್ಷಕರ, ಕಾರ್ಯಕರ್ತರಿಗೆ ವಿಶೇಷ ತರಬೇತಿಯನ್ನು ಶೀಘ್ರವೇ ಹಮ್ಮಿಕೊಳ್ಳಲಾಗುವುದು ಎಂದು ಭರತ್ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಉಪಮೇಯರ್ ಮುಹಮ್ಮದ್ ಕೆ., ಅಂಗನವಾಡಿ ಸೂಪರ್ ವೈಸರ್ ಮಾಧುರಿ ಎಸ್.,

ಮಾಜಿ ಕಾರ್ಪೊರೇಟರ್ ಶರತ್ ಕುಮಾರ್, ಮರಕಡ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ, ಬಾಲ ವಿಕಾಸ ಸಮಿತಿಯ ಮಂಜುಳಾ, ಸ್ತ್ರೀ ಜಾಗೃತಿ ಸಮಿತಿಯ ಸಂಶಾದ್, ದೇವಿ ಫ್ರೆಂಡ್ಸ್ ಸರ್ಕಲ್ ಇದರ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News