ಭಾರತದ ಅಣ್ವಸ್ತ್ರ ನೀತಿಯಲ್ಲಿ ಮಹತ್ತರ ಬದಲಾವಣೆಯ ಸುಳಿವು ನೀಡಿದ ರಾಜನಾಥ್ ಸಿಂಗ್

Update: 2019-08-16 09:43 GMT

ಹೊಸದಿಲ್ಲಿ, ಆ.16: ಅಣ್ವಸ್ತ್ರಗಳ ಕುರಿತಂತೆ ಭಾರತದ ನೀತಿಯಲ್ಲಿ ಮಹತ್ತರ ಬದಲಾವಣೆಗಳಾಗಬಹುದೆಂಬ ಸುಳಿವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ನೀಡಿದ್ದಾರೆ. ಭಾರತ ಪ್ರಸಕ್ತ ಅಣ್ವಸ್ತ್ರಗಳ ಕುರಿತಂತೆ ಹೊಂದಿರುವ “ನೋ ಫಸ್ಟ್ ಯೂಸ್ ಪಾಲಿಸಿ” ಭವಿಷ್ಯದಲ್ಲಿ ಬದಲಾಗಬಹುದೆಂದು ಅವರು ಹೇಳಿದ್ದಾರೆ.

ಪೊಖ್ರಾನ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, “ಇಲ್ಲಿಯ ತನಕ ನಮ್ಮ ಅಣ್ವಸ್ತ್ರ ನೀತಿ ‘ನೋ ಫಸ್ಟ್ ಯೂಸ್’ ಆಗಿತ್ತು. ಭವಿಷ್ಯದಲ್ಲಿ ಏನಾಗುವುದೆಂಬುದು ಸಂದರ್ಭಗಳನ್ನು ಅವಲಂಬಿಸಿದೆ,'' ಎಂದಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಥಮ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಲೆಂದು ಸಚಿವರು ಶುಕ್ರವಾರ ಪೊಖ್ರಾನ್‍ಗೆ ಆಗಮಿಸಿದ್ದರು.

``ಭಾರತ ಜವಾಬ್ದಾರಿಯುತ ಅಣ್ವಸ್ತ್ರ ರಾಷ್ಟ್ರವೆಂಬ ಸ್ಥಾನಮಾನ ಪಡೆದಿರುವುದು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಹೆಮ್ಮೆಯ ವಿಚಾರ. ಅಟಲ್ ಜೀ ಅವರಿಗೆ ದೇಶ ಸದಾ ಋಣಭಾರಿಯಾಗಿರುವುದು'' ಎಂದೂ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News