ಜಮ್ಮು-ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ ಪುನರಾರಂಭ

Update: 2019-08-17 06:55 GMT

ಜಮ್ಮು, ಆ.17: ಕಳೆದ ಕೆಲವು ದಿನಗಳಿಂದ ನಿರ್ಬಂಧಕ್ಕೊಳಗಾಗಿರುವ ಮೊಬೈಲ್ ಇಂಟರ್‌ನೆಟ್ ಸೇವೆಗಳನ್ನು ಜಮ್ಮು ಹಾಗೂ ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಶನಿವಾರ ಪುನರಾರಂಭಿಸಲಾಗಿದೆ. ಅದೇ ರೀತಿ ಶ್ರೀನಗರ ಸಹಿತ ಕಣಿವೆ ರಾಜ್ಯದ 50,000ಕ್ಕೂ ಅಧಿಕ ಸ್ಥಿರ ದೂರವಾಣಿ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ. ಕಾಶ್ಮೀರದ 100 ಟೆಲಿಫೋನ್ ಎಕ್ಸ್‌ಚೇಂಜ್‌ಗಳ ಪೈಕಿ 17ರಲ್ಲಿ ಮತ್ತೆ ಕಾರ್ಯ ಆರಂಭವಾಗಿದೆ.

 ಶನಿವಾರ ಬೆಳಗ್ಗೆಯಿಂದ ಜಮ್ಮು, ರಿಯಾಸಿ, ಸಾಂಬಾ, ಕಥುವಾ ಹಾಗೂ ಉಧಂಪುರ ಜಿಲ್ಲೆಗಳಲ್ಲಿ 2ಜಿ ಮೊಬೈಲ್ ಇಂಟರ್‌ನೆಟ್ ಸೇವೆಗಳು ಮತ್ತೆ ಆರಂಭವಾಗಿವೆ.

  ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಪ್ರಾತಿನಿಧ್ಯವನ್ನು ರದ್ದುಪಡಿಸುವ ಮೊದಲು ಸುರಕ್ಷತೆೆಯ ದೃಷ್ಟಿಯಿಂದ ಆ.5ರಂದು ರಾಜ್ಯದಲ್ಲಿ ಮೊಬೈಲ್ ಇಂಟರ್‌ನೆಟ್ ಸಹಿತ ಎಲ್ಲ ಸಂಪರ್ಕ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಜಮ್ಮು ಹಾಗೂ ಕಾಶ್ಮೀರದ ಮೇಲೆ ವಿಧಿಸಲಾಗಿರುವ ನಿರ್ಬಂಧಗಳನ್ನು ಸಡಿಲಿಸಲು ಸರಕಾರ ಶುಕ್ರವಾರ ನಿರ್ಧರಿಸಿತ್ತು. ಎಲ್ಲ ಸರಕಾರಿ ಕಚೇರಿಗಳ ಬಾಗಿಲನ್ನು ಶನಿವಾರವೇ ತೆರೆಯುವಂತೆ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News