ಮಂಗಳೂರು: ಸದ್ಭಾವನಾ ವೇದಿಕೆಯಿಂದ ಸ್ವಾತಂತ್ರೋತ್ಸವ

Update: 2019-08-17 10:31 GMT

ಮಂಗಳೂರು, ಆ.17: ಅತ್ತಾವರದ ಅತ್ತಾವರ ಕಟ್ಟೆ ಮೈದಾನದಲ್ಲಿ ಸದ್ಭಾವನಾ ವೇದಿಕೆ ಜಪ್ಪು ವರ್ತಲ ವತಿಯಿಂದ ಸ್ವಾತಂತ್ರೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಬಕಾರಿ ಇಲಾಖೆಯ ಮಂಗಳೂರು ಉಪ ವಿಭಾಗದ ಉಪ ಅಧೀಕ್ಷಕ ಶಿವಪ್ರಸಾದ್ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಶಿವಪ್ರಸಾದ್, ಹಿರಿಯರ ಬಲಿದಾನದಿಂದಾಗಿ ನಮಗೆ ಸ್ವಾತಂತ್ರ ಲಭಿಸಿದೆ. ಇದನ್ನು ನಾವು ಕಾಪಾಡಿಕೊಂಡು ಹೋಗಬೇಕು. ನಮ್ಮ ಪ್ರದೇಶದಲ್ಲಿ ಬೆಳೆಯುತ್ತಿರುವ ಅಮಲು ಪದಾರ್ಥಗಳಿಂದ ಯುವಜನ ಹಾಳಾಗುತ್ತಿದೆ. ಇದನ್ನು ನಿಲ್ಲಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.

ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ಸ್ ಸಿವಿಲ್ ಇಂಜಿನಿಯರ್ಸ್ ಮಂಗಳೂರು ಸೆಂಟರ್‌ನ ಚೇರ್‌ಮನ್ ಅರುಣ್ ಪ್ರಭಾ ಮಾತನಾಡಿ, ಸ್ವಾತಂತ್ರ, ಭ್ರಾತೃತ್ವ ಮತ್ತು ಸಮಾನತೆಯೇ ನಮ್ಮ ದೇಶ ಮುನ್ನಡೆಯಲು ಪ್ರೇರಣೆಯಾಗಿದೆ. ಸದ್ಭಾವನೆಯೇ ನಮ್ಮ ಅಡಿಪಾಯವಾಗಿದ್ದು, ನಾವು ಭಾರತೀಯರಾಗಿ ಬಾಳಬೇಕು ಎಂದರು.

ಮಂಗಳೂರು ಧರ್ಮಪ್ರಾಂತದ ಪಾಲನಾ ಪರಿಷತ್ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯವಾದಿ ಎಂ.ಪಿ.ನರೋನ್ಹ, ಜಮಾಅತ್ ಇಸ್ಲಾಮಿ ಹಿಂದ್‌ನ ಸ್ಥಾನೀಯ ಅಧ್ಯಕ್ಷ ಕೆ.ಎಂ.ಅಶ್ರಫ್ ಮಾತನಾಡಿದರು. ವೇದಿಕೆಯ ಅಧ್ಯಕ್ಷ ಕೇಶವ್ ಭಟ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಸರೋಜಿನಿ ಮಧುಸೂದನ್ ಕುಶೆ ಶಾಲಾ ಮಕ್ಕಳಿಂದ ದೇಶಭಕ್ತ ಗೀತೆಗಳನ್ನು ಹಾಡಿಸಲಾಯಿತು. ಸದ್ಭಾವನಾ ವೇದಿಕೆಯ ಕಾರ್ಯಕ್ರಮ ಸಂಚಾಲಕ ದೀಪಕ್ ಡಿಸೋಜ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಸಾಲೇಹ್ ಮುಹಮ್ಮದ್ ವಂದಿಸಿದರು. ವೇದಿಕೆಯ ಸದಸ್ಯ ಅಬ್ದುಲ್ ಗಫೂರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News