ಕೋಡಿ ಎನ್‌ಎಂಎ ಸೌಹಾರ್ದ ಭವನ, ಪಾಲಿಕ್ಲಿನಿಕ್ ಉದ್ಘಾಟನೆ

Update: 2019-08-17 13:47 GMT

ಕುಂದಾಪುರ, ಆ.17: ಎಂ.ಕೋಡಿಯಲ್ಲಿ ನಿರ್ಮಿಸಲಾದ ಎನ್.ಎಂ.ಎ. ಸೌಹಾರ್ದ ಭವನ ಹಾಗೂ ಪಾಲಿಕ್ಲಿನಿಕ್‌ನ್ನು ಕರ್ನಾಟಕ ಮುಸ್ಲಿಂ ಜಮಾತ್‌ನ ಪ್ರಧಾನ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ. ಶಾಫಿ ಸಅದಿ ಶನಿವಾರ ಉದ್ಘಾಟಿಸಿದರು.

ಹೊಸ ಆಂಬುಲೆನ್ಸ್‌ಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ಎನ್.ಎಂ.ಎ. ಸೌದಿ ಅರೇಬಿಯಾದ ಕೇಂದ್ರ ಸಮಿತಿಯ ಅಧ್ಯಕ್ಷ ಅಬೂಬಕರ್ ಮಹಮದ್ ಅಲಿ ಕೋಡಿ ವಹಿಸಿದ್ದರು. ಈ ಸಂದರ್ಭ ದಲ್ಲಿ ಪಾಲಿ ಕ್ಲಿನಿಕ್, ರೋಗಿಗಳ ತಪಾಸಣಾ ಕೇಂದ್ರ, ಫಾರ್ಮಸಿ, ತುರ್ತು ಚಿಕಿತ್ಸಾ ಕೇಂದ್ರ, ಪ್ರಾರ್ಥನಾ ಕೊಠಡಿ, ಮಹಿಳಾ ಜನರಲ್ ವಾರ್ಡ್, ಪುರುಷರ ಜನರಲ್ ವಾರ್ಡ್, ಸಂಸ್ಥೆಯ ಕಚೇರಿ ಉದ್ಘಾಟನೆಗೊಂಡಿತು. ನೂತನ ಸದಸ್ಯತ್ವ ಕಾರ್ಡ್ ನೋಂದಣಿಗೆ ಚಾಲನೆ ನೀಡಲಾಯಿತು.

ಡಾ. ಮಹಮ್ಮದ್ ಫಾಝಿಲ್ ರಿಝ್ವಿ ಕಾವಲ್‌ಕಟ್ಟೆ ದುವಾ ನೆರವೇರಿಸಿದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಹಂಗಳೂರಿನ ಸೈಂಟ್ ಪಿಯೂಸ್ ಚರ್ಚ್‌ನ ಧರ್ಮಗುರು ಜೋನ್ ಆಲ್ಫ್ರೆಡ್ ಬರ್ಬೋಜಾ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ ಮಾತನಾಡಿದರು.

ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಪಿ.ಇಬ್ರಾಹಿಂ, ವಕೀಲ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬೂಬಕರ್ ನೇಜಾರ್, ಕೋಡಿ ವೆಲ್‌ಫೇರ್ ಯೆಂಗ್‌ಮೆನ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಅಶ್ರಫ್ ಕೋಡಿ, ರಾಷ್ಟ್ರೀಯ ಜನತಾದಳ ರಾಜ್ಯಾಧ್ಯಕ್ಷ ಜಿ. ಯಾಕೂಬ್ ಹೊಸನಗರ, ಕುಂದಾಪುರ ಎನ್‌ಎಂಎ ಕೋಡಿ ಸಂಚಾಲಕ ಹಾಜಿ ತಾಹೀರ್ ಹಸನ್, ಭಟ್ಕಳ್ ಅರ್ಬನ್ ಕೋಆಪರೇಟಿವ್ ಬ್ಯಾಂಕಿನ ಕುಂದಾಪುರ ಮ್ಯಾನೇಜರ್ ವಿನೋದ್ ಪ್ರಭು, ಎನ್‌ಎಂಎ ಕುಂದಾಪುರ ತಾಲೂಕು ಸಮಿತಿ ಅಧ್ಯಕ್ಷ ಗುಲ್ವಾಡಿ ಸರ್ದಾರ್, ಪುರಸಭಾ ಸದಸ್ಯರಾದ ಅಬೂ ಮಹಮ್ಮದ್, ಅಶ್ಫಕ್ ಕೋಡಿ, ಕಮಲಾ ಮಂಜುನಾಥ್, ಲಕ್ಷ್ಮೀಬಾಯಿ ಕೋಡಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ವೈದ್ಯರಾದ ಡಾ. ಅಬ್ದುಲ್ ಖಾದರ್, ಡಾ. ಪ್ರಿಯಾಂಕ ಜೋಗಿ, ಡಾ.ರಾಘವೇಂದ್ರ ಹೆಬ್ಬಾರ್, ಡಾ.ಶಿಲ್ಪ ಕೆ., ಎನ್‌ಎಂಎ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಅಬ್ದುಲ್ಲಾ ವಳಚ್ಚಿಲ್, ಉಪಾಧ್ಯಕ್ಷ ಕೆ.ಎಂ.ಅಬ್ದುಲ್ ರಹೀಂ, ದಮಾಮ್ ಸಂಚಾಲಕ ಜಿ. ರಫೀಕ್, ಕುಂದಾಪುರ ತಾಲೂಕು ಸಮಿತಿ ಗೌರವಾಧ್ಯಕ್ಷ ಮಹಮ್ಮದಾಲಿ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕುರೇಶಿ, ಕೋಶಾಧಿಕಾರಿ ಕೆ.ಮಹಮ್ಮದ್, ಸಂಚಾಲಕ ಅಬ್ದುಲ್ಲಾ ಕೋಟೆ, ಉಪಾಧ್ಯಕ್ಷರಾದ ಶೇಖ್ ಅಬು ಮಹಮ್ಮದ್, ಶಾಬಾನ್ ಹಂಗಳೂರು, ಜತೆ ಕಾರ್ಯದರ್ಶಿ ಹಾಜಿ ಅಬ್ಬುಶೇಕ್ ಸಾಹೇಬ್, ಕಂಡ್ಲೂರು ಝಿಯಾ ಏಜುಕೇಶನ್ ಟ್ರಸ್ಟ್‌ನ ಮೌಲಾನ ಉಬೇದುಲ್ಲಾ, ಕಟ್ಟಡ ವಿನ್ಯಾಸಕ ಪಿ.ಎಂ. ಇಕ್ಬಾಲ್, ಯುನೂಸ್ ಬಾಯಿ ಭಟ್ಕಳ್, ರಿಯಾಝ್ ಬಿ.ವೈ., ಡಾ. ಆಸಿಫ್ ಕೋಟೇಶ್ವರ, ಸತ್ತಾರ್ ಬಹ್ರೈನ್, ಜಿ.ಸುಲೈಮಾನ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಸಂಸ್ಥಾಪಕ ಮಹಮ್ಮದ್ ತಾಹೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜತೆ ಕಾರ್ಯದರ್ಶಿ ಆಸಿಫ್ ಮಸೂದ್ ಸ್ವಾಗತಿಸಿದರು. ಕೋಶಾಧಿಕಾರಿ ಅಹ್ಮದ್ ಯೂಸುಫ್ ವಂದಿಸಿದರು. ಶಿಕ್ಷಕ ಹರ್ಷ ಕೋಟೇಶ್ವರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News