ಉಡುಪಿ: ಉಚಿತ ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿ

Update: 2019-08-17 15:09 GMT

ಉಡುಪಿ, ಆ.17: ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಅವಕಾಶ ವನ್ನು ಕಲ್ಪಿಸುವ ಸಲುವಾಗಿ ಸಾರ್ವಜನಿಕ ವಲಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ಟಡಿ ಸರ್ಕಲ್ ಕಾರ್ಯಕ್ರಮದಡಿಯಲ್ಲಿ ಉಚಿತ ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ಪ್ರೈಮ್ ತರಬೇತಿ ಸಂಸ್ಥೆಯ ಪೃಥ್ವಿ ಇನ್‌ಸ್ಟಿಟ್ಯೂಟ್ ಆಪ್ ಮ್ಯಾನೇಜ್‌ಮೆಂಟ್‌ನಲ್ಲಿ ಆಯೋಜಿಸಲಾಗಿತ್ತು.

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಯುವ ಉದ್ಯೋಗಾಕಾಂಕ್ಷಿಗಳ ಸೇವಾ ಕೇಂದ್ರ (ಯಸ್) ಉಡುಪಿ ಜಿಲ್ಲೆ ಹಾಗೂ ಪೃಥ್ವಿ ಇನ್‌ಸ್ಟಿಟ್ಯೂಟ್ ಆಪ್ ಮ್ಯಾನೆಂಜ್‌ಮೆಂಟ್, ಪ್ರೈಮ್ ತರಬೇತಿ ಸಂಸ್ಥೆ ಇವರ ಸಹಬಾಗಿತ್ವದಲ್ಲಿ ಏರ್ಪಡಿಸಲಾಗಿರುವ ಬ್ಯಾಂಕಿಂಗ್ ಪರೀಕ್ಷಾ ಪೂರ್ವ ತರಬೇತಿಯನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಾಸ್ಕರ್ ಎ ಅಮೀನ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪೃಥ್ವಿ ಇನ್‌ಸ್ಟಿಟ್ಯೂಟ್ ಆಪ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಪ್ರೊ. ರಾಧಾಕೃಷ್ಣ ಆಚಾರ್ಯ, ಸಂಸ್ಥೆಯ ಸ್ಥಾಪಕ ರತ್ನಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗ ಅಭಿವೃದ್ಧಿ ನಿರ್ವಾಹಕ ಪ್ರಸನ್ನ, ಸಮಾಲೋಚಕ ಹಾಗೂ ತರಬೇತುದಾರ ಜಗತ್ ಕೆ. ಉಪಸ್ಥಿತರಿದ್ದರು. ಶಿರ್ವ ಸೈಂಟ್ ಮೇರಿಸ್ ಕಾಲೇಜ್‌ನ ನಿವೃತ್ತ ಪ್ರಾಧ್ಯಾಪಕ ಪ್ರೊ.ಗೋಪಾಲಕೃಷ್ಣ ಸಾಮಗ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News