ಕುನಿಲ್ ಇಲ್ಮು ಅಕಾಡಮಿಯಿಂದ ನೆರೆಪೀಡಿತರಿಗೆ ನೆರವು

Update: 2019-08-17 15:17 GMT

ಮಂಗಳೂರು, ಆ.17: ಕರ್ನಾಟಕದ ನೆರೆ ಪೀಡಿತ ಸಂತ್ರಸ್ತರಿಗೆ ನಾಟೆಕಲ್ ಕುನಿಲ್ ಇಲ್ಮು ಅಕಾಡಮಿ ಹಾಗೂ ಶಾಲಾ ಮಕ್ಕಳು ಶನಿವಾರ ಸಹಾಯ ಹಸ್ತದ ನೆರವು ನೀಡಿದರು.

ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರ ಆದೇಶದಂತೆ ಎಲ್ಲ ವಿದ್ಯಾರ್ಥಿಗಳು ತಮ್ಮ ಪೋಷಕರ ಸಹಾಯದೊಂದಿಗೆ ದೈನಂದಿನ ಅಗತ್ಯ ಪೂರ್ವ ವಸ್ತುಗಳನ್ನು ಸಂಗ್ರಹಿಸಿದರು. ಇವುಗಳನ್ನು ಜಿಲ್ಲಾಧಿಕಾರಿ ಬರ ಪರಿಹಾರ ಸಾಧನಗಳ ಸಂಗ್ರಹ ಕೇಂದ್ರವಾದ ಕೆಪಿಟಿಗೆ ಕಳುಹಿಸಿ ಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಫಕ್ರುದ್ದೀನ್ ಕುನಿಲ್, ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ಪಿ.ಎಸ್.ಮೊಯ್ದಿನ್ ಅವರು ಸಹಾಯಹಸ್ತ ನೀಡಿದ ಶಾಲಾ ಪ್ರಾಂಶುಪಾಲರು ಹಾಗೂ ಪೋಷಕರನ್ನು ಪ್ರಶಂಸಿಸಿದರು. ಇಂತಹದ್ದೊಂದು ಸಹಾಯಹಸ್ತದಿಂದ ಕುನಿಲ್ ಇಲ್ಮು ಅಕಾಡಮಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News