‘ದೋಸ್ತಿ ಕಲಾಕಾರ್ ಫೆರ್ಮಾಯ್’ನಿಂದ ಕೊಳವೆ ಬಾವಿಗೆ ಮಳೆ ಕೊಯ್ಲು

Update: 2019-08-17 15:26 GMT

ಮಂಗಳೂರು, ಆ.17: ಉಳಾಯಿಬೆಟ್ಟು ಗ್ರಾಪಂ ವ್ಯಾಪ್ತಿಯ ‘ದೋಸ್ತಿ ಕಲಾಕಾರ ಫೆರ್ಮಾಯ್’ ಸಂಘಟನೆಯ ಸದಸ್ಯರು ಜೊತೆಗೂಡಿ ಮಾಡಿದ ಸಾರ್ವಜನಿಕ ಕೊಳವೆ ಬಾವಿಗೆ ಮಳೆಕೊಯ್ಲು ಘಟಕದ ಲೋಕಾರ್ಪಣೆ ಮತ್ತು ಮಾಹಿತಿ ಕಾರ್ಯಕ್ರಮವು ಗುರುವಾರ ಪೆರ್ಮಂಕಿಯಲ್ಲಿ ನಡೆಯಿತು.

ಸಾರ್ವಜನಿಕ ಕೊಳವೆ ಬಾವಿಯನ್ನು ಮಳೆ ಕೊಯ್ಲು ಮೂಲಕ ಮರುಪೂರಣಗೊಳಿಸಿದ ಸದಸ್ಯರು ಇತರ ಗ್ರಾಪಂಗಳಿಗೆ ಮಾದರಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ವಸಂತ್ ಪೂಜಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಪಿಡಿಒ ಗುರುಸಿದ್ಧ ಹುಬ್ಬಳ್ಳಿ, ಕಾರ್ಯದರ್ಶಿ ರಾಮಪ್ಪ, ಮಲ್ಲೂರು ಗ್ರಾಪಂ ಕಾರ್ಯದರ್ಶಿ ರಾಬರ್ಟ್ ಫೆರ್ನಾಂಡಿಸ್, ರೇಶ್ಮಾ ಮೂಲ್ಯ, ಉದ್ಯಮಿ ಪ್ರಶಾಂತ್ ಕುಮಾರ್ ಸುನಿಲ್, ಫ್ರಾನ್ಸಿಸ್ ಕುಟಿನ್ಹಾ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಕೈಕಂಬ ದಿಶಾ ಟ್ರಸ್ಟ್ ನಿರ್ದೇಶಕ ಸಿಲ್ವೆಸ್ಟರ್ ಡಿಸೋಜ, ಯೋಜನೆಯ ಸಂಯೋಜಕ ಹೆನ್ರಿ ವಾಲ್ಟರ್ ಭಾಗವಹಿಸಿ ಮಾಹಿತಿ ನೀಡಿದರು.

ಉಳಾಯಿಬೆಟ್ಟು ಗ್ರಾಪಂ ಕಾರ್ಯದರ್ಶಿ ರಾಮಪ್ಪಕಾರ್ಯಾಗಾರದ ಮಾಹಿತಿ ನೀಡಿದರು. ದೋಸ್ತಿ ಕಲಾಕಾರ್ ಸಂಘದ ಅಧ್ಯಕ್ಷೆ ಪ್ರೀತಿ ಸಲ್ಲಾನ್ಹಾ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ಸಿಲ್ವೆಸ್ಟರ್ ಲೋಬೊ ವಂದಿಸಿದರು. ಮಿನೊಲ್ ಬ್ರಾಗ್ಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News