‘420 ಜೋಕುಲು’ ಚಿತ್ರದ ಶೀರ್ಷಿಕೆ ಅನಾವರಣ

Update: 2019-08-17 15:30 GMT

ಮಂಗಳೂರು, ಆ.17: ಬೆನ್‌ಡಿಕ್ಟ್ ಎಂಟರ್‌ಪ್ರೈಸಸ್ ಬ್ಯಾನರ್‌ನಡಿ ನಿರ್ಮಾಣವಾಗಲಿರುವ ‘420 ಜೋಕುಲು’ ಚಿತ್ರದ ಶೀರ್ಷಿಕೆಯನ್ನು ಚಲನಚಿತ್ರ ನಿರ್ದೇಶಕ ವಿಶ್ವನಾಥ ಕೋಡಿಕಲ್ ನಗರದ ಪತ್ರಿಕಾಭವನದಲ್ಲಿ ಶನಿವಾರ ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ‘420 ಜೋಕುಲು’ ಚಿತ್ರದ ನಿರ್ದೇಶಕ ಶಂಕರ್‌ನಾಗ್ ಜೆ.ಕೆ. ಈ ಚಿತ್ರವು ಸಂಪೂರ್ಣ ಹಾಸ್ಯಮಯ ಕತೆಯನ್ನು ಹೊಂದಿದ್ದು, ಅರ್ಥಪೂರ್ಣವಾದ ಸನ್ನಿವೇಶಗಳೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶವನ್ನೂ ಒಳಗೊಂಡಿದೆ. ಜನರಿಗಾಗುವ ಮೋಸದ ಕುರಿತು ಹಾಸ್ಯಮಯವಾಗಿ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ಈ ಸಂದರ್ಭ ನಟ ಸಂದೀಪ್ ಮಲಾನಿ, ಹಿರಿಯ ನಟ ಅಶೋಕ್‌ಕುಮಾರ್ ಕಾಸರಗೋಡು, ನಾಯಕ ಗೌತಂ ಶೆಣೈ, ನಾಯಕಿ ಧೃತಿ ಸಾಯಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News