ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್: ಹಲವು ವಿಭಾಗಗಳಲ್ಲಿ ಚಾಂಪಿಯನ್ ಆದ ಸಂತ ಅಲೋಶಿಯಸ್ ಕಾಲೇಜ್

Update: 2019-08-17 17:14 GMT

ಮಂಗಳೂರು, ಆ.17: ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಫುಟ್‌ಬಾಲ್ ಮೈದಾನದಲ್ಲಿ ಇಪ್ಪತ್ತು ದಿನಗಳಿಂದ ನಡೆಯುತ್ತಿದ್ದ 23ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟದ ಪೈನಲ್ ಪಂದ್ಯ ನಡೆಯಿತು.

ಹಿರಿಯ ಪ್ರಾಥಮಿಕ ಶಾಲಾ ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಮಂಗಳೂರು ಒನ್, ರನ್ನರ್‌ಅಪ್ ಪ್ರಶಸ್ತಿಯನ್ನು ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಪ್ರೈಮರಿ ಸ್ಕೂಲ್ ಪಡೆದುಕೊಂಡಿತು. ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಮಂಗಳೂರು ಒನ್ ತಂಡದ ಮಹೀ ಅಮೀನ್ ಪಡೆದುಕೊಂಡರು. 

ಹಿರಿಯ ಪ್ರಾಥಮಿಕ ಶಾಲಾ ಹುಡುಗರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಉಳ್ಳಾಲದ ಹಜರತ್ ಸೈಯದ್ ಮದನಿ ಶಾಲಾ ತಂಡ ಪಡೆದುಕೊಂಡಿತು. ಇಖ್ರಾ ಶಾಲೆಯು ರನ್ನರ್ ಅಪ್ ಪಡೆದಿದೆ. ಉತ್ತಮ ಆಟಗಾರ ಪ್ರಶಸ್ತಿಯನ್ನು ಇಖ್ರಾ ಶಾಲೆಯ ಮುಹಮ್ಮದ್ ಪಡೆದುಕೊಂಡರು.

ಪ್ರೌಢಶಾಲಾ ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸೈಂಟ್ ಜೋಸೆಫ್ ಶಾಲೆ ಪಡೆದುಕೊಂಡರೆ, ರನ್ನರ್‌ಅಪ್ ಸ್ಥಾನವನ್ನು ಎನ್‌ಐಟಿಕೆ ಪಡೆದುಕೊಂಡಿದೆ. ಉತ್ತಮ ಆಟಗಾರ್ತಿಯಾಗಿ ಸೈಂಟ್ ಸೋಸೆಫ್ ಶಾಲೆಯ ರಚನಾ ಶೆಟ್ಟಿ ಹೊರಹೊಮ್ಮಿದರು.

ಪ್ರೌಢಶಾಲಾ ಹುಡುಗರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ರೋಸಾರಿಯೋ ಶಾಲೆ ಪಡೆದುಕೊಂಡರೆ, ರನ್ನರ್‌ಅಪ್ ಸ್ಥಾನವನ್ನು ಸ್ನೇಹ ಪಬ್ಲಿಕ್ ಶಾಲೆ ಪಡೆಯಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ಸ್ನೇಹ ಪಬ್ಲಿಕ್ ಶಾಲೆಯ ರಯೀದ್ ಪಡೆದರು.

ಪಿಯುಸಿ ಕಾಲೇಜು ವಿಭಾಗದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಬಿ ತಂಡ ಪ್ರಥಮ ಬಹುಮಾನ ಪಡೆದರೆ, ರನ್ನರ್‌ಅಪ್ ಸ್ಥಾನವನ್ನು ಸಂತ ಅಲೋಶಿಯಸ್ ಎ ತಂಡ ಪಡೆಯಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ಸಂತ ಅಲೋಶಿಯಸ್ ಎ ತಂಡದ ಮಾಝ್ ಪಡೆದರು. 

ಕಾಲೇಜು ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸಂತ ಅಲೋಶಿಯಸ್ ಕಾಲೇಜಿನ ಎ ತಂಡ ಪಡೆದರೆ, ರನ್ನರ್‌ಅಪ್ ಸ್ಥಾನವನ್ನು ಸಂತ ಅಲೋಶಿಯಸ್ ಬಿ ತಂಡ ಪಡೆಯಿತು. ಉತ್ತಮ ಆಟಗಾರರಾಗಿ ಡಿಯೋನ ಡಿಸೋಜ ಹೊರಹೊಮ್ಮಿದರು.

ಪದವಿ ಕಾಲೇಜು ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸಂತ ಅಲೋಶಿಯಸ್ ತಂಡ ಪಡೆದರೆ, ರನ್ನರ್‌ಅಪ್ ಪ್ರಶಸ್ತಿಯನ್ನು ಯೆನೆಪೊಯ ಕಾಲೇಜು ಬಿ ತಂಡ ಪಡೆಯಿತು. ಉತ್ತಮ ಆಟಗಾರರಾಗಿ ಸಂತ ಅಲೋಶಿಯಸ್ ಕಾಲೇಜಿನ ನಿಯಾಝ್ ಹೊರಹೊಮ್ಮಿದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಣೇಶ್ ರಾವ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಪ್ರಧಾನ ವ್ಯವಸ್ಥಾಕ ಟಿ. ನಂಜುಡಪ್ಪ, ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ.ಫಾ. ಡೈನೇಶಿಯಸ್ ವಾಸ್, ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ, ಮೀನುಗಾರರ ಮುಖಂಡ ಮೋಹನ್ ಬೇಂಗ್ರೆ, ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ ಕೋಚ್ ಬಿ.ಬಿ. ಥಾಮಸ್, ಎ.ಕೆ. ಫ್ಲೆ ವುಡ್ಸ್ ನಿರ್ದೇಶಕ ಎ.ಕೆ. ನಿಯಾಝ್, ಆಟಗಾರ ಮುಶ್ರಫ್, ಜಾನ್, ಸಮೀರ್, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News