ಒಡಿಶಾ: ಪ್ರೊಫೆಸರ್, ಪತ್ನಿಯ ಮೃತದೇಹ ಪತ್ತೆ

Update: 2019-08-17 17:50 GMT

ಭುವನೇಶ್ವರ, ಆ.17: ರೂರ್ಕೆಲದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ(ಎನ್‌ಐಟಿ)ಯ ಸಹಾಯಕ ಪ್ರೊಫೆಸರ್ ಮತ್ತು ಅವರ ಪತ್ನಿಯ ಮೃತದೇಹ ಸಂಸ್ಥೆಯ ಆವರಣದಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮೂಲದವರಾದ ಪ್ರೊ ಆರ್ ಜಯಬಾಲನ್ ಮತ್ತವರ ಪತ್ನಿ ಮಾಲ್ವಿ ಕೇಸವನ್ 9 ವರ್ಷದ ಹಿಂದೆ ವಿವಾಹವಾಗಿದ್ದು ದಂಪತಿಗೆ ಮಕ್ಕಳಿರಲಿಲ್ಲ. ಸಂಸ್ಥೆಯ ಆವರಣದಲ್ಲಿರುವ ನಿವಾಸದಲ್ಲಿ ದಂಪತಿ ನೆಲೆಸಿದ್ದು ಕಳೆದ ಎರಡು ದಿನದಿಂದ ಮನೆಯೊಳಗೆ ಲಾಕ್ ಮಾಡಿದ ಸ್ಥಿತಿಯಲ್ಲಿದ್ದ ಕಾರಣ ನೆರೆಮನೆಯವರು ಸಂಸ್ಥೆಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಅವರು ತಕ್ಷಣ ಪೊಲೀಸರಿಗೆ ತಿಳಿಸಿದ್ದು ಪೊಲೀಸರು ಮನೆಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದಾಗ ದಂಪತಿಯ ಮೃತದೇಹ ಪತ್ತೆಯಾಗಿದೆ. ಜೊತೆಗೆ ಇಂಗ್ಲಿಷ್ ಮತ್ತು ತಮಿಳು ಭಾಷೆಯಲ್ಲಿ ಬರೆದಿರುವ ಮರಣಪತ್ರ (ಡೆತ್‌ನೋಟ್) ಕೂಡಾ ಪತ್ತೆಯಾಗಿದ್ದು ಅದರಲ್ಲಿ ತಮ್ಮ ಸಾವಿಗೆ ಯಾರೂ ಜವಾಬ್ದಾರರಲ್ಲ ಎಂದು ಬರೆಯಲಾಗಿದೆ. ಮೇಲ್ನೋಟಕ್ಕೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News