ನ್ಯೂಟನ್‌ಗಿಂತ ಮೊದಲೇ ಭಾರತೀಯ ಪುರಾಣಗಳಲ್ಲಿ ಗುರುತ್ವಾಕರ್ಷಣೆ ಉಲ್ಲೇಖವಿತ್ತು ಎಂದ ಕೇಂದ್ರ ಸಚಿವ ಪೋಖ್ರಿಯಾಲ್

Update: 2019-08-17 18:17 GMT

 ಹೊಸದಿಲ್ಲಿ, ಆ.17: ವಿಜ್ಞಾನಿ ಐಸಾಕ್ ನ್ಯೂಟನ್ ಗುರುತ್ವಾಕರ್ಷಣೆ ಶಕ್ತಿಯನ್ನು ಕಂಡು ಹಿಡಿಯುವ ಎಷ್ಟೋ ಮೊದಲೇ ಭಾರತೀಯ ಪುರಾಣಗಳು ಅದನ್ನು ಉಲ್ಲೇಖಿಸಿದ್ದವು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ ಪೋಖ್ರಿಯಾಲ್ ‘ನಿಷಾಂಕ್’ ಅವರು ಹೇಳಿದ್ದಾರೆ.

 ಶನಿವಾರ ಇಲ್ಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಆವರಣದಲ್ಲಿ ಆಯೋಜಿಸಲಾಗಿದ್ದ ‘ಜ್ಞಾನೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ವಿಜ್ಞಾನ ಕ್ಷೇತ್ರದಲ್ಲಿ ಭಾರತವು ನಿಜಕ್ಕೂ ಹರಿಕಾರನಾಗಿತ್ತು ಎನ್ನುವುದನ್ನು ಸಾಬೀತುಗೊಳಿಸಲು ಪ್ರಾಚೀನ ಭಾರತೀಯ ವಿಜ್ಞಾನದ ಮೇಲೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವಂತೆ ಐಐಟಿಗಳು ಮತ್ತು ಎನ್‌ಐಟಿಗಳ ನಿರ್ದೇಶಕರನ್ನು ಮನವಿ ಮಾಡಿಕೊಂಡರು.

‘ ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತವು ಮುಂದಿತ್ತು ಎಂದು ನಾನು ಹೇಳಿದಾಗ ಇಂದಿನ ಯುವಜನರು ನನ್ನನ್ನು ಪ್ರಶ್ನಿಸುತ್ತಾರೆ. ನಾವು ಹಿಂದೆ ಹೊಂದಿದ್ದ ಜ್ಞಾನವನ್ನು ಆಧುನಿಕ ವಿಧಾನದಲ್ಲಿ ಯುವಜನರಿಗೆ ತಿಳಿಸುವ ಪ್ರಯತ್ನಗಳೇ ಆಗಿಲ್ಲ. ಇದೇ ಕಾರಣದಿಂದ ಪ್ರಾಚೀನ ವಿಜ್ಞಾನದ ಬಗ್ಗೆ ಸಂಶೋಧನೆಗಳು ನಡೆಯಬೇಕು ಎಂದು ಹೇಳುತ್ತಿದ್ದೇನೆ ’ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News