ಕಾರ್ಮಿಕರಿಗೆ ಶಕ್ತಿ ತುಂಬುವ ಕೆಲಸ ಕಾರ್ಮಿಕ ಸಂಘಟನೆಗಳಿಂದಾಗಲಿ: ಸಂಸದ ನಳಿನ್ ಕುಮಾರ್

Update: 2019-08-18 12:21 GMT

ಮಂಗಳೂರು, ಆ.18: ಕಾರ್ಮಿಕರಿಗೆ ಶಕ್ತಿ ತುಂಬುವ ಕೆಲಸ ಕಾರ್ಮಿಕ ಸಂಘಟನೆಗಳಿಂದಾಗಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ನಗರದ ಆರ್ ಎಂಎಸ್ ಮತ್ತು ಎಂಎಂಎಸ್  ನೌಕರರ ಎರಡು ದಿನಗಳ 53ನೆ ಜಂಟಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನ್ಯಾಯಯುತವಾಗಿ ದೊರೆಯಬೇಕಾದ ಸೌಲಭ್ಯ ಪಡೆಯಲು ಸಮರ್ಥ ಸಂಘಟನೆ ಸಹಕಾರಿ. ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಅಂಚೆ ಮತ್ತು ಆಕಾಶವಾಣಿ ಇಲಾಖೆಗಳಿಗೆ ಹೊಸ ರೂಪ ನೀಡಿದ್ದಾರೆ. ಅಂಚೆ ಕಚೇರಿಯಲ್ಲಿ ಬ್ಯಾಂಕಿಂಗ್ ಸೌಲಭ್ಯ ದೊರೆಯುವಂತಾಗಿದೆ. ಮಂಗಳೂರು ಆರ್. ಎಂ.ಎಸ್ ಕಚೇರಿ ನವೀಕರಣಗೊಳ್ಳಲು ನೆರವು ನೀಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮಂಗಳೂರು ಆರ್.ಎಂ.ಎಸ್ ಹಿರಿಯ ಅಧಿಕಾರಿ ಹರ್ಷ ನೆಟ್ಟಾರ್, ವಿಭಾಗ ಅಧೀಕ್ಷಕ ವಸಂತ ಬಿ, ಹಿರಿಯ ಮುಖಂಡರಾದ ವಿ.ಜಿ. ಲಕ್ಷ್ಮೀನಾರಾಯಣ, ಕಮಲೇಶ್, ಎ.ಸಿ.ಅಬ್ದುಲ್ ಕಲಾಂ ಹಾಗೂ ಸಂಘಟನೆಯ ಪದಾಧಿಕಾರಿಗಳಾದ ಎ.ಶ್ರೀನಿವಾಸ, ಉದಯ ಶಂಕರ  ರಾವ್, ಆನಂದ, ಕೃಷ್ಣ ನಾಯಕ, ಸದಾನಂದ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ಅಧಿಕಾರಿ ಶೇಷಗಿರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಕ್ಷರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿಶ್ವನಾಥ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News