ಕಲ್ಲಡ್ಕ: ಆಟಿದ ಕೂಟ ಕಾರ್ಯಕ್ರಮ

Update: 2019-08-18 12:29 GMT

ಬಂಟ್ವಾಳ, ಆ. 18: ಏಳು ಗ್ರಾಮಗಳನ್ನೊಳಗೊಂಡ ಕಲ್ಲಡ್ಕ ವಲಯ ಬಂಟರ ಸಂಘದ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮವು ಕಲ್ಲಡ್ಕ ಸಮೀಪದ ಅಮ್ಟೂರಿನ ಜಯಶ್ರೀ ಕಾಂಪ್ಲೆಕ್ಸ್‍ನಲ್ಲಿ ಸಡೆಯಿತು.

ಬಂಟವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕಲ್ಲಡ್ಕ ವಲಯ ಬಂಟರ ಸಂಘದ ಅಧ್ಯಕ್ಷ ಕೆ.ಪದ್ಮನಾಭ ರೈ ಸಭಾಧ್ಯಕ್ಷತೆ ವಹಿಸಿದ್ದರು. ಮಂಗಳೂರು ಎ.ಜೆ. ಆಸ್ಪತ್ರೆಯ ಮುಖ್ಯಸ್ಥ ಡಾ. ಪ್ರಶಾಂತ್ ಮಾರ್ಲ, ಉದ್ಯಮಿ ಸಂದೇಶ್ ಶೆಟ್ಟಿ ಆರೆಬೆಟ್ಟು, ಶ್ರೀ ನರಹರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರತಿಭಾ ರೈ ಎ., ಬಂಟವಾಳ ಬಂಟರ ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯ ಶಾಂತಾರಾಮ ಶೆಟ್ಟಿ ರವರು ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭ ಬಂಟರ ಸಂಘದ ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿ ರಮಾ ಎಸ್. ಭಂಡಾರಿ ಆಟಿ ತಿಂಗಳ ಮಹತ್ವವನ್ನು ತಿಳಿಸಿದರು.
ಇದೇ ವೇಳೆ ಸಮಾಜದ ವಿಶೇಷ ಸಾಧನೆಗೈದ ಹಿರಿಯರಾದ ಮಹಾಬಲಶೆಟ್ಟಿ ಕಕ್ಕೆಮಜಲು, ಜಾನಕಿ ಎ.ರೈ ಅಮ್ಟೂರು, ಸೇಸಣ್ಣ ಶೆಟ್ಟಿ ಬೆಜಂತಿಮಾರು ಅವರನ್ನು ಸನ್ಮಾನಿಸಲಾಯಿತು.

ಪ್ರಸ್ತುತ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆಗೈದ ಪ್ರಖ್ಯಾತ್ ಶೆಟ್ಟಿ ವೀರಕಂಭ ಅವರನ್ನು ಗೌರವಿಸಲಾಯಿತು.

ಬಂಟ್ವಾಳ ತಾಲೂಕು ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಆಶಾ ಪ್ರಸಾದ್ ರೈ, ಗೌರವಾಧ್ಯಕ್ಷ ನಂದಗೋಕುಲ ಮಹಾಬಲ ಶೆಟ್ಟಿ, ಕಾರ್ಯ ದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು, ಗ್ರಾಮ ಸಮಿತಿ ಅಧ್ಯಕ್ಷ ವಿಶ್ವನಾಥ ಆಳ್ವ, ಪ್ರಭಾಕರ ಶೆಟ್ಟಿ ಬೈದರಡ್ಕ, ರಾಮಣ್ಣ ಶೆಟ್ಟಿ ಸುಧೇಕಾರ್, ದೇವಿಪ್ರಸಾದ್ ಶೆಟ್ಟಿ ಮೋಂತಿಮಾರ್, ಬಾಲಕೃಷ್ಣ ಶೆಟ್ಟಿ ಬೊಂಡಾಲ ನಗ್ತಿಮಾರು, ಪ್ರೇಮನಾಥ ಶೆಟ್ಟಿ ಅಮನತರ, ವಲಯ ಯುವ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಸೀನಾಜೆ, ಸುರೇಶ್ ಶೆಟ್ಟಿ ಕಾಂದಿಲ, ಉದಯರೈ ಕೂವೆಕೋಡಿ, ಸಂದೀಪ್ ಶೆಟ್ಟಿ ಆರೆಬೆಟ್ಟು, ಸೂರಜ್ ರೈ ಕೂವೆಕೋಡಿ, ನಿಶಾಂತ್ ರೈ ನಡ್ಡಾಲು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News