ಬಂಟ್ವಾಳ: 11 ರೋಟರಿ ಕ್ಲಬ್‍ಗಳ ಜಂಟಿ ಸಭೆ

Update: 2019-08-18 12:30 GMT

ಬಂಟ್ವಾಳ, ಆ. 18: ರೋಟರಿ ಜಿಲ್ಲೆ 3181, ವಲಯ 4ರ 11 ರೋಟರಿ ಕ್ಲಬ್‍ಗಳ ಜಂಟಿ ಸಭೆ ಬಂಟ್ವಾಳ ರೋಟರಿ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ರೋಟರಿ ಫೌಂಡೇಶನ್‍ನ ಅಧ್ಯಕ್ಷ ಡಾ. ರಮೇಶಾನಂದ ಸೋಮಯಾಜಿ ಫೌಂಡೇಶನ್‍ನ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ರೋಟರಿ ಕ್ಲಬ್‍ನ ಸದಸ್ಯರಾಗಿರುವ ಎಂ.ವಿ.ಭಟ್, ಸುನೀಲ್ ಶೆಣೈ, ಜಿಯೋ ಡಿಸೋಜಾ, ಕಾಂತಪ್ಪ ಗೌಡ, ಚಂದಪ್ಪ ಮೂಲ್ಯ ಅವರನ್ನು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಗೌರವಿಸಲಾಯಿತು.

ವಲಯ 4ರ ಸಹಾಯಕ ಗವರ್ನರ್ ರಿತೇಶ್ ಬಾಳಿಗ ರೋಟ್‍ವಾಲ್ ಸಾಪ್ತಾಹಿಕವನ್ನು ಬಿಡುಗಡೆಗೊಳಿಸಿದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗ ಅಧ್ಯಕ್ಷತೆ ವಹಿಸಿದ್ದರು.

ಮೂಡಬಿದಿರೆ, ಬೆಳ್ತಂಗಡಿ, ಮೂಡಬಿದಿರೆ ಟೆಂಪಲ್ ಟೌನ್, ಬಂಟ್ವಾಳ ಟೌನ್, ಮಡಂತ್ಯಾರ್, ಬಂಟ್ವಾಳ ಲೊರೆಟ್ಟೋ ಹಿಲ್ಸ್, ಉಪ್ಪಿನಂಗಡಿ, ಫರಂಗಿಪೇಟೆ, ವಿಟ್ಲ, ಪುತ್ತೂರು ಸಿಟಿ ರೋಟರಿ ಕ್ಲಬ್‍ನ ಅಧ್ಯಕ್ಷರು ಉಪಸ್ಥಿತರಿದ್ದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷೆ ಶಿವಾನಿ ಬಾಳಿಗ ಸ್ವಾಗತಿಸಿ, ಕಾರ್ಯದರ್ಶಿ ಸ್ಮಿತಾ ಸಲ್ದಾನ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News